ಯಾದಗಿರಿ: ಕಾಂಗ್ರೆಸ್ ಪಕ್ಷದಿಂದಲ್ಲೆ ಮಾತ್ರಸಾಮಾಜಿಕ ನ್ಯಾಯ ಕೊಡಲು ಸಾಧ್ಯವೆಂದು ಕೆಪಿಸಿಸಿ ಹಿಂದುಳಿದ ಘಟಕದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ ಹೇಳಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಹಿಂದುಳಿದ ವರ್ಗಗಳ ಮುಖಂಡರ ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಬಿಜೆಪಿಯವರಿಗೆ ಇದು ಅಂದು ಬಂದಿಲ್ಲ, ಇಂದು ಇಲ್ಲ ಮತ್ತು ಮುಂದೆಯೇ ಬರುವುದಿಲ್ಲ.ಕಾರಣ ಅವರಿಗೆ ಸಾಮಾಜಿಕ ನ್ಯಾಯದ ಕಲ್ಪನೆಯೇ ಇಲ್ಲ. ಅಗತ್ಯವಿದ್ದಾಗ ಈ ಸಮಾಜದ ಜನರನ್ನು ಬಳಸಿಕೊಳುತ್ತಾರೆಂದರು.

ರಾಜ್ಯದಲ್ಲಿ 197 ಮುಖ್ಯ ಉಪಜಾತಿ ಮತ್ತು 744 ಉಪಜಾತಿಗಳಿವೆ. ಈ ಎಲ್ಲರಿಗೂ ಸಮಾನವಾಗಿ ಕಾಣುವುದೇ ಕಾಂಗ್ರೆಸ್ ಪಕ್ಷವೆಂದರು. ಈ ನ್ಯಾಯಪರ ಕೆಲಸ ಮಾಡಲು ಬಿಜೆಪಿಯವರಿಂದ ಸಾಧ್ಯವಿಲ್ಲ. ಕಾರಣ, ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲ. ಅದು ಏನೇ ಇದ್ದರೂ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವೆಂದರು. ದೇಶದ ಜನತೆಗೆ ಶಿಕ್ಷಣ, ಆರೋಗ್ಯ, ರಸ್ತೆಗಳು, ಕಟ್ಟಡಗಳು, ಸೇತುವೆ ಹೀಗೆ ಅಲ್ಲವೂ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎನ್ನುವುದು ಯಾರು ಮರೆಯಬಾರದು. ಹಿಂದುಳಿದವರ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದಲ್ಲೆ ಸಾಧ್ಯವೆಂದ ಶ್ರೀನಿವಾಸ, ಮುಂದಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲುವಂತೇ ಪಕ್ಷ ಸಂಘಟಿಸಬೇಕೆಂದರು.

ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಪಕ್ಷದ ಹಿಂದುಳಿದ ಘಟಕದ ರಾಜ್ಯಾಧ್ಯಕ್ಷರಾದ ಶ್ರೀನಿವಾಸ ಅವರು ಅಲ್ಪ ಅವಧಿಯಲ್ಲಿಯೇ ಹಿಂದುಳಿದ ವರ್ಗಗಳ ಘಟಕಗಳನ್ನು ರಚಿಸಿ ಹೆಚ್ಚಿನ ಬಲ ತುಂಬಿದ್ದಾರೆಂದರು.

ಬರುವ ದಿನಗಳಲ್ಲಿ ಎಲ್ಲ ಸ್ಥಳಿಯ ಚುನಾವಣೆಗಳಲ್ಲಿ ಅವಕಾಶ ಸಿಗುತ್ತದೆ. ಪಕ್ಷದ ಸಂಘಟನೆಗಾಗಿ ನಾವೆಲ್ಲರೂ ಶ್ರಮಿಸೋಣ ಎಂದರು.

ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ ಮಾತನಾಡಿ, ದೇಶದಲ್ಲಿ ಉದ್ಯೋಗ, ಶಿಕ್ಷಣ ಹೀಗೆ ವಿವಿಧ ಹಂತದಲ್ಲಿ ಮಿಸಲಾತಿ ತಂದಿದ್ದು ಕಾಂಗ್ರೆಸ್ ಪಕ್ಷವೆಂದರು. ಬಿಜೆಪಿ ಬರಿ ಸುಳ್ಳು ಹೇಳಿ, ಮತದಾರರಿಗೆ ತಪ್ಪಿಸಿ ಅಧಿಕಾರಕ್ಕೆ ಬರುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದರು.

ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರ ಶ್ಯಾಮಸನ್ ಮಾಳಿಕೇರಿ, ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಸಾಹಿಬಣ್ಣಾ ಕೆಂಗೂರಿ, ಮುಖಂಡರಾದ ಶರಣಪ್ಪ ಮಾನೇಗಾರ, ಸಾಬಣ್ಣಾ ಬೊರಬಂಡಾ, ತಾಯಪ್ಪ ಯಾದವ, ವಿಠಲ್ ಯಾದವ, ಡಾ.ಭೀಮಣ್ಣ ಮೇಟಿ, ಬಾಬುರಾವ ಕಾಡ್ಲೂರ, ಮಲ್ಲಿಕಾರ್ಜುನ ಈಟೆ, ರಾಘವೆಂದ್ರ ಮಾನಸಗಲ್, ರಂಗನಗೌಡ ದೇವಿಕೇರಿ, ಅಶೋಕ ಗಣಪುರ, ಬಂಗಾರಪ್ಪ ನಾಟೇಕಾರ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor