×
Ad

ಕೂಲೂರ ಮಲ್ಲಪ್ಪ ಸ್ಮಾರಕ ಭವನಕ್ಕೆ ರಾಜ್ಯ ಸರ್ಕಾರದಿಂದ ಉಚಿತ ಜಾಗ : ಶಾಸಕ ಚೆನ್ನಾರಡ್ಡಿ ಪಾಟೀಲ್

Update: 2025-06-06 19:28 IST

ಯಾದಗಿರಿ: ಸ್ವಾತಂತ್ರ್ಯ ಹೋರಾಟಗಾರ, ಕಲ್ಯಾಣ ಕರ್ನಾಟಕದ ಗಾಂಧಿ, ಮಾಜಿ ಸಂಸದ ಕೂಲೂರ ಮಲ್ಲಪ್ಪ ಅವರ ಸ್ಮಾರಕ ಭವನದ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸುಮಾರು 6,114 ಚದರ ಮೀಟರ್ ಜಾಗ ಉಚಿತವಾಗಿ ನೀಡುವ ಮೂಲಕ ಗಿರಿಜಿಲ್ಲೆಗೆ ಬಹುದೊಡ್ಡ ಕಾಣಿಕೆ ನೀಡಿದೆ ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ಹೇಳಿದ್ದಾರೆ.

ರಾಜ್ಯ ಸರ್ಕಾರ ಉಚಿತವಾಗಿ ಜಾಗ ನೀಡಿದ ಹಿನ್ನಲೆಯಲ್ಲಿ ಶಾಸಕರನ್ನು ಶುಕ್ರವಾರ ಸನ್ಮಾನಿಸಿದ ಸ್ಮಾರಕ ಟ್ರಸ್ಟ್ ನ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಲ್ಲಪ್ಪ ಅಂದಿನ‌ ಕಾಲದಲ್ಲಿಯೇ ಮಾಜಿ ಪ್ರಧಾನಿ ನೆಹರು ಮತ್ತು ಇಂದಿರಾಗಾಂಧಿ ಅವರಿಗೆ ನಿಕಟವರ್ತಿಯಾಗಿದ್ದರು ಎಂದು ಶಾಸಕರು ಹೇಳಿದರು.

ಸ್ಮಾರಕ ಭವನ ನಿರ್ಮಾಣಕ್ಕೆ ನೀಲ ನಕ್ಷೆ ತಯಾರಿಸಿ ಬೇಕಾದ ಅನುದಾನ ನೀಡಲು ತಾವು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಸ್ಮಾರಕ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ನಿಲಹಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಸಾಯಿಬಣ್ಣ ಕೆಂಗೂರಿ, ಶರಣಪ್ಪಗೌಡ ಕೌಳ್ಳೂರ್ ಹಾಗೂ ಪದಾಧಿಕಾರಿಗಳಾದ ಸಿದ್ದಣ್ಣಗೌಡ ಕಾಡಮನೋರ್, ಚನ್ನಕೇಶವಗೌಡ ಬಾಣತಿಹಾಳ, ಸುರೇಶ ಮಡ್ಡಿ, ಸಲೀಂ ಹುಂಡೇಕಲ್, ಪ್ರಭುಲಿಂಗ ವಾರದ್, ಮಲ್ಲಯ್ಯ ಕಸಬಿ, ಮಲಣ್ಣ ಐಕೂರ್, ಹಣಮಂತ್ರಾಯ ತೆಕರಾಳ, ನಿಂಗು ಜಡಿ, ಸಿದ್ದು ಪೂಜಾರಿ, ವಿಜಯ ಬೆಳಗುಂದಿ, ಭೀಮು ಪೂಜಾರಿ ಸೇರಿದಂತೆ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News