×
Ad

ಸುರಪುರ |ದಲಿತ ಸಂಘಟನೆಗಳ ಒಕ್ಕೂಟದಿಂದ ಗೃಹ ಸಚಿವರಿಗೆ ಮನವಿ

Update: 2025-08-05 21:29 IST

ಸುರಪುರ: ನಗರದ ಡಾ.ಬಿ.ಆರ್ ಅಂಬೇಡ್ಕರ್ ಮೂರ್ತಿ ಹಿಂಭಾಗದ ಮೈದಾನದಲ್ಲಿ ಹಾಕಲಾಗಿದ್ದ ನೀಲಿ ಧ್ವಜಗಳನ್ನು ಇಳಿಸಿರುವ ಘಟನೆಯಲ್ಲಿ ಸುರಪುರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ದಲಿತ ಸಂಘಕರ ವಿರುದ್ಧವಾಗಿ ಕೆಲಸ ಮಾಡಿದ್ದು ಅವರನ್ನು ವರ್ಗಾವಣೆಗೊಳಿಸುವಂತೆ ಆಗ್ರಹಿಸಿ ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಮುಖಂಡರು ಬೆಂಗಳೂರಿನಲ್ಲಿ ಗೃಹಸಚಿವ ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ್ದಾರೆ.

ಮಂಗಳವಾರ ಭೇಟಿ ಮಾಡಿದ ಮುಖಂಡರು, ಪಿ.ಐ ಅವರು ದಲಿತ ಸಂಘಟನೆಗಳ ಮುಖಂಡರ ವಿರುದ್ಧವೇ ಪ್ರಕರಣ ದಾಖಲು ಮಾಡಿದ್ದು, ಈ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೋರಾಟಗಾರರ ಮನವಿ ಆಲಿಸಿದ ಸಚಿವರು ನಿಮ್ಮ ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಲೊಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ನೀಲಿ ಧ್ವಜಗಳನ್ನು ಹಾಕಲಾಗಿರುವ ಸ್ಥಳವನ್ನು ಒಕ್ಕೂಟಕ್ಕೆ ಒದಗಿಸಿಕೊಡಬೇಕು. ಆ ಸ್ಥಳದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಲ್ಲಿ ಉದ್ಯಾನವನ, ಸಾಂಸ್ಕೃತಿಕ ಭವನ ಹಾಗೂ ಗ್ರಂಥಾಲಯ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿರುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಒಕ್ಕೂಟದ ಮುಖಂಡರುಗಳಾದ ಮಾನಪ್ಪ ಕಟ್ಟಿಮನಿ,ಮಲ್ಲಿಕಾರ್ಜುನ ಕ್ರಾಂತಿ, ವೆಂಕಟೇಶ ಹೊಸ್ಮನಿ, ಮಾಳಪ್ಪ ಕಿರದಳ್ಳಿ, ರಾಹುಲ್ ಹುಲಿಮನಿ, ಶಿವಲಿಂಗ ಹಸನಾಪುರ, ತಿಪ್ಪಣ್ಣ ಶೆಳ್ಳಗಿ, ಹಣಮಂತ ಬೊಮ್ಮನಹಳ್ಳಿ, ಶರಣು ಹಸನಾಪುರ, ವೀರಭದ್ರಪ್ಪ ತಳವಾರಗೇರ, ಪಾರಪ್ಪ ದೇವತ್ಕಲ್, ಶಿವಶಂಕರ ಬೊಮ್ಮನಹಳ್ಳಿ, ಶೇಖರ್ ಮಂಗಳೂರ, ಸಂಗಣ್ಣ ಹೆಮ್ಮಡಗಿ, ಸಾಹೇಬಗೌಡ ವಾಗಣಗೇರ, ಮಲ್ಲಿಕಾರ್ಜುನ ಬಡಿಗೇರ, ಸೋಮು ಕಟ್ಟಿಮನಿ, ಮಲ್ಲಿಕಾರ್ಜುನ ವಾಗಣಗೇರ ಹಾಗೂ ಸಂತೋಷ ಸಾಗರ್ ಇತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News