×
Ad

ಸುರಪುರ | ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಗೆ ಪದಾಧಿಕಾರಿಗಳ ನೇಮಕ

Update: 2025-08-04 18:49 IST

ಸುರಪುರ: ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸಂಘಟನೆಯ ಗ್ರಾಮ ಶಾಖೆ ರಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಬಸವರಾಜ ಸಿ. ಹಾದಿಮನಿ ಮಾತನಾಡಿ, ನಮ್ಮ ಸಂಘದ ರಾಜ್ಯಾಧ್ಯಕ್ಷರಾದ ನರಸಪ್ಪ ದಂಡೋರ ನೇತೃತ್ವದಲ್ಲಿ ರಾಜ್ಯದಲ್ಲಿರುವ ಮಾದಿಗರಿಗೆ ಒಳಮೀಸಲಾತಿ ಜಾರಿಗೊಳಿಸುವಂತೆ ಈಗಾಗಲೇ ಸರಕಾರಕ್ಕೆ ಅನೇಕ ಬಾರಿ ಮನವಿ ಮಾಡಲಾಗಿದೆ. ಎರಡು ದಿನಗಳ ಹಿಂದೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಸರಕಾರ ಈ ಕುರಿತು ನಿರ್ಲಕ್ಷ್ಯ ವಹಿಸಿದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನೂತನವಾಗಿ ನೇಮಕಗೊಂಡ ಎಲ್ಲ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ತಾಲ್ಲೂಕ ಗೌರವಾಧ್ಯಕ್ಷ ಬಾಬು ವಾಗಣಗೇರಿ, ಪ್ರಧಾನ ಕಾರ್ಯದರ್ಶಿ ಭೀಮರಾಯ ದೇವತ್ಕಲ್, ಲಕ್ಷ್ಮಣ ಕಟ್ಟಿಮನಿ, ಯಲ್ಲಪ್ಪ ಹೆಮ್ಮಡಗಿ, ಹಣಮಂತ ಅಡ್ಡೊಡಗಿ, ಸಹದೇವಪ್ಪ ಬೆಣ್ಣಿ ಇದ್ದರು.

ನೂತನ ಪದಾಧಿಕಾರಿಗಳು:

ದುರ್ಗಪ್ಪ (ಗೌರವಾಧ್ಯಕ್ಷ), ಹಣಮಂತ ಕಟ್ಟಿಮನಿ (ಅಧ್ಯಕ್ಷ), ಧರ್ಮಣ್ಣ ಕಟ್ಟಿಮನಿ (ಉಪಾಧ್ಯಕ್ಷ), ಭೀಮರಾಯ ಬಡಿಗೇರ (ಪ್ರ.ಕಾರ್ಯದರ್ಶಿ), ಮೆರಪ್ಪ ಕಟ್ಟಿಮನಿ (ಸಂ.ಕಾರ್ಯದರ್ಶಿ), ತಿರುಪತಿ (ಕಾರ್ಯದರ್ಶಿ), ದುರ್ಗಪ್ಪ (ಖಜಾಂಚಿ) ಹಾಗೂ ದುರ್ಗಪ್ಪ ಹೊಸಮನಿ, ಪರಶುರಾಮ ಕಟ್ಟಿಮನಿ ಇವರನ್ನು ಸದಸ್ಯರನ್ನಾಗಿ ನೇಮಕಗೊಳಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News