×
Ad

ಸುರಪುರ | ಆ.13 ರಂದು ನಕಲಿ ಜಾತಿ ಪ್ರಮಾಣ ಪತ್ರದ ವಿರುದ್ಧ ಬೃಹತ್ ಪ್ರತಿಭಟನೆ : ರಮೇಶ ದೊರೆ

Update: 2025-08-10 20:05 IST

ಸುರಪುರ: ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವವರ ಮತ್ತು ಕೊಡುವವರ ವಿರುದ್ಧ ಇದೇ ಆ.13 ರಂದು ಸುರಪುರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಮುಖಂಡ ರಮೇಶ ದೊರೆ ಆಲ್ದಾಳ ತಿಳಿಸಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಕಲಿ ಜಾತಿ ಪ್ರಮಾಣ ಪತ್ರ ನೀಡದಂತೆ ಸರಕಾರಕ್ಕೆ ಒತ್ತಾಯಿಸುವ ಜೊತೆಗೆ ಇನ್ನೂ ಹಲವಾರು ಜ್ವಲಂತ ಸಮಸ್ಯೆಗಳ ವಿರುದ್ಧ ಪ್ರತಿಭಟನೆ ನಡೆಯಲಿದ್ದು ,ತಾಲ್ಲೂಕಿನಾದ್ಯಂತ ಎಲ್ಲ ಗ್ರಾಮಗಳಲ್ಲಿರುವ ನಮ್ಮ ವಾಲ್ಮೀಕಿ ನಾಯಕ ಸಮುದಾಯದ ಎಲ್ಲರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮುಖಂಡರಾದ ವೆಂಕಟೇಶ ಬೇಟೆಗಾರ, ನಾಗರಾಜ ನಾಯಕ ಪ್ಯಾಪ್ಲಿ ಇತರರು ಮಾತನಾಡಿದರು.

ತಾಲ್ಲೂಕಿನ ವಾಗಣಗೇರಾ, ತಳವಾರಗೇರಾ, ಪೇಠ ಅಮ್ಮಾಪುರ, ಜಾಲಿಬೆಂಚಿ, ಚಿಗರಿಹಾಳ, ಕೂಡಲಗಿ, ಶಖಾಪುರ ಗ್ರಾಮಗಳಲ್ಲಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಕನಕಾಚಲ ನಾಯಕ, ಹಣಮಂತ್ರಾಯ ನಾಯಕ ಪೇಠ ಅಮ್ಮಾಪುರ, ಪರಶುರಾಮ ದೊರೆ ದೇವಾಪುರ, ರವಿ ನಾಯಕ ಬೈರಿಮಡ್ಡಿ,ದೇವು ನಾಯಕ ಜಾಲಿಬೆಂಚಿ ಸೇರಿದಂತೆ ಅನೇಕ ಜನ ಗ್ರಾಮದ ಮುಖಂಡರು, ಯುವಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News