ಸುರಪುರ | ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ
ಸುರಪುರ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತ್ಯೂತ್ತರವಾಗಿ ನಮ್ಮ ದೇಶದ ಸೈನಿಕರು ಆಪರೇಷನ್ ಸಿಂಧೂರ ಹೆಸರಿನಲ್ಲಿ ನಡೆಸಿದ ಯುದ್ಧದ ಸವಿ ನೆನಪಿಗಾಗಿ ನಮ್ಮೆಲ್ಲ ಸೈನಿಕರಿಗೆ ಗೌರವಾರ್ಥವಾಗಿ ಇಂದು ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆ ಸಸಿ ನೆಟ್ಟು ಸಿಂಧೂರ ವನ ನಿರ್ಮಾಣ ಮಾಡುವ ಮೂಲಕ ವಿಶೇಷವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ರವಿ ನಾಯಕ ಬೈರಿಮಡ್ಡಿ ತಿಳಿಸಿದರು.
ನಗರದ ಸತ್ಯಂಪೇಟೆಯ ಸರಕಾರಿ ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸಿಂಧೂರ ವನ ನಿರ್ಮಾಣಕ್ಕೆ ಸಸಿಗಳನ್ನು ನೆಟ್ಟು ನೀರುಣಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಘದ ತಾಲೂಕು ಅಧ್ಯಕ್ಷ ಗೋಪಾಲ ನಾಯಕ ಸತ್ಯಂಪೇಟೆ ನೇತೃತ್ವ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ವಾಸುದೇವ ಗಂಗೆ, ಮಾಜಿ ನಗರಸಭೆ ಸದಸ್ಯ ವೆಂಕಟೇಶ ನಾಯಕ ಶುಕ್ಲ, ಜಾನಕಿದೇವಿ ಪ್ರೌಢಶಾಲೆ ಮುಖ್ಯಗುರು ಹಣಮಂತ್ರಾಯ ನಾಯಕ, ಸತ್ಯಂಪೇಟೆ ಶಾಲೆಯ ಮುಖ್ಯಗುರು ಮಹಾದೇವ, ಸಹ ಶಿಕ್ಷಕಿ ಪಿಡ್ಡಮ್ಮ, ವಿರುಪಾಕ್ಷಿ ನಾಯಕ, ಶಿವರಾಜ ನಾಯಕ ಮಕಾಶಿ, ಪಿಡಿಓ ಮಲ್ಲಿಕಾರ್ಜುನ ಬೇವಿನಾಳ, ಶಿವಮೂರ್ತಿ ದಿವಳಗುಡ್ಡ, ಭೀಮಣ್ಣ ಲಕ್ಷ್ಮೀಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.