×
Ad

ಸುರಪುರ | ತಾಲ್ಲೂಕು ಆಡಳಿತದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಸರಕಾರ ಪಂಚ ಗ್ಯಾರಂಟಿ ಮೂಲಕ ನಾಡಿನ ಅಭಿವೃದ್ಧಿ ಮಾಡುತ್ತಿದೆ : ಶಾಸಕ ರಾಜಾ ವೇಣುಗೋಪಾಲ ನಾಯಕ

Update: 2025-08-15 21:52 IST

ಸುರಪುರ: ನಾಡು ಮತ್ತು ದೇಶದ ಅಭಿವೃದ್ಧಿ ಎಂದರೆ ಅದು ಕಾಂಗ್ರೆಸ್ ಪಕ್ಷ ದಿಂದ ಸಾಧ್ಯ. ಇಂದು ಪಂಚ ಗ್ಯಾರಂಟಿ ಮೂಲಕ ನಮ್ಮ ಸರಕಾರ ನಾಡಿನ ಅಭಿವೃದ್ಧಿ ಮಾಡುತ್ತಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅನೇಕ ಜನ ಹಿರಿಯರು ತ್ಯಾಗ ಬಲಿದಾನ ದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ಅದನ್ನು ನೆನಪಿನಲ್ಲಿಟ್ಟುಕೊಂಡು ನಾವೆಲ್ಲರು ಅವರನ್ನು ಸ್ಮರಿಸೋಣ ಹಾಗೂ ಎಲ್ಲರು ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡೋಣ ಹಾಗೂ ನಮ್ಮ ದೇಶದ ಶಿಕ್ಷಣ ಸರಿಯಿಲ್ಲ ಎನ್ನುತ್ತಾರೆ. ಆದರೆ ನಮ್ಮ ದೇಶದ ಶಿಕ್ಷಣ ತುಂಬಾ ಉತ್ತಮವಾಗಿದೆ. ಮುಂದೆ ಎಲ್ಲಾ ರಾಷ್ಟ್ರಗಳು ನಮ್ಮ ದೇಶದ ಶಿಕ್ಷಣಕ್ಕಾಗಿ ಮುಂದೆ ಬರುತ್ತಾರೆ ಎಂದರು.

ತಹಸಿಲ್ದಾರ್ ಹುಸೇನಸಾಬ್ ಎ.ಸರಕಾವಸ್ ಮಾತನಾಡಿದರು.

ಕಾರ್ಯಕ್ರದ ಆರಂಭದಲ್ಲಿ ಮಹಾತ್ಮ ಗಾಂಧಿ,ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು .ನಂತರ ಪೊಲೀಸ್ ಇಲಾಖೆ, ಗೃಹ ರಕ್ಷಕದಳ, ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೌಡ್ಸ್ ವತಿಯಿಂದ ಧ್ವಜಾ ವಂದನೆ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ಉಪ ಖನಾನೆ ಅಧಿಕಾರಿ ಸಣ್ಣಕೆಪ್ಪ ಕೊಂಡಿಕಾರ್, ಬಿಇಓ ಯಲ್ಲಪ್ಪ ಕಾಡ್ಲೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು,

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಹೀನಾಕೌಸರ್ ಶಕೀಲ್ ಅಹ್ಮದ್ ಖುರೇಷಿ,ಉಪಾಧ್ಯಕ್ಷ ರಾಜಾ ಪಿಡ್ಡನಾಯಕ (ತಾತಾ),ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ,ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ,ಡಿವೈಎಸ್ಪಿ ಜಾವಿದ್ ಇನಾಂದಾರ್,ತಾ.ಪ ಇಓ ಬಸವರಾಜ ಸಜ್ಜನ್,ಟಿಹೆಚ್‌ಓ ಡಾ.ಆರ್.ವಿ ನಾಯಕ,ರಮೇಶ ದೊರೆ ಆಲ್ದಾಳ,ರಾಜಾ ಶುಷಾಂತ ನಾಯಕ,ನಿಂಗಣ್ಣ ಬಾಚಿಮ್ಟಟಿ,ಪಿ.ಐ ಉಮೇಶ ನಾಯಕ,ನಗರಸಭೆ ಪೌರಾಯುಕ್ತ ಬಸವರಾಜ ಟಣಕೆದಾರ, ವೆಂಕಟೇಶ ಬೇಟೆಗಾರ,ಬೀರಲಿಂಗ ಬಾದ್ಯಾಪುರ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜಶೇಖರ ದೇಸಾಯಿ ನಿರೂಪಿಸಿದರು, ಪಂಡೀತ ನಿಂಬೂರ ಸ್ವಾಗತಿಸಿದರು,ಖಾದರ್ ಪಟೇಲ್ ವಂದಿಸಿದರು.ವಿವಿಧ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆ ಪಡೆದವು.

ವಿವಿಧ ಕ್ಷೇತ್ರಗಳ ಸಾಧಕರಾದ ಮಹಾಂತೇಶ ಗೋನಾಲ(ಸಾಹಿತ್ಯ),ಡಾ.ಹರೀಣಿ ಸಂಪತ್ತಕುಮಾರ(ಉನ್ನತ ಶಿಕ್ಷಣ),ಅಂಬ್ಲಪ್ಪ ದಫೇದಾರ(ನಗರಸಭೆ),ದೇವೆಂದ್ರಪ್ಪ ಬೋಯಿ(ಸಾವಯವ ಕೃಷಿ), ಗಿರೀಶ ಶಾಬಾದಿ, ವಿಯಜಚಾರ್ಯ ಪುರೋಹಿತ(ಪತ್ರಿಕಾರಂಗ), ಸಾವಿತ್ರಿ ಗಾಳಿ,ಸರೋಜಾ ಬಸವನಗುಡಿ(ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ) ವೆಂಕಟೇಶ ಕುಲಕರ್ಣಿ (ಚಿತ್ರಕಲೆ), ರೇವಪ್ಪ ತೆಗ್ಗಿನಮನಿ(ಕಂದಾಯ ಇಲಾಖೆ), ಫಾತೀಮಾ ಬೇಗಂ(ಕಂದಾಯ ಇಲಾಖೆ),ಅಬ್ದುಲ್ ರಫೀಕ್,ಸವಿತಾ ಲೋಕರೆ(ಆರೋಗ್ಯ),ಸೋಮರಡ್ಡಿ ಮಂಗಿಹಾಳ,ಖಾಜಾ ಜಹೀರ್ ಹುಸೇನ್ (ಶಿಕ್ಷಣ ಇಲಾಖೆ)ಜಯತೀರ್ಥ ಜೋಶಿ(ತಾಲ್ಲೂಕ ಪಂಚಾಯತ್), ಏಕನಾಥ ಮಾರ್ಗದಾಳ (ಜೆಸ್ಕಾಂ), ರಮೇಶ ಮುಂಡರಗಿ(ಸಮಾಜ ಕಲ್ಯಾಣ) ಹಾಗೂ ನಾಗರಾಜ (ಎಮ್‌ಡಿಆರ್‌ಎಸ್ ಎಸ್.ಟಿ) ಇವರುಗಳಿಗೆ ಹಾಗೂ ಎಸೆಸೆಲ್ಸಿ ಮತ್ತು ಪಿಯುಸಿ ನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News