ಸುರಪುರ | ಗ್ರಂಥಾಲಯವು ಜ್ಞಾನ ದೇಗುಲ ಇದ್ದಂತೆ : ರಾಘವೇಂದ್ರ ಭಕ್ರಿ
Update: 2025-08-14 21:29 IST
ಸುರಪುರ: ಗ್ರಂಥಾಲಯಗಳು ಎಂದರೆ ಜ್ಞಾನ ದೇಗುಲ ಇದ್ದಂತೆ. ಶ್ರದ್ದೆಯಿಂದ ಓದಿದಲ್ಲಿ ಬದುಕನ್ನು ರೂಪಿಸುವ ಶಕ್ತಿ ಗ್ರಂಥಾಲಯಗಳಿಗಿದೆ ಎಂದು ಚಿಂತಕ ರಾಘವೇಂದ್ರ ಭಕ್ರಿ ಹೇಳಿದರು.
ಸುರಪುರ ನಗರದ ಜಿಲ್ಲಾ ಶಾಖ ಗ್ರಂಥಾಲಯದಲ್ಲಿ ಗ್ರಂಥ ಪಾಲಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ವರ್ಷವೂ ಎಸ್ ಆರ್ ರಂಗನಾಥನ್ ಅವರ ಜನುಮದಿನದ ಅಂಗವಾಗಿ ಗ್ರಂಥ ಪಾಲಕರ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಎಸ್ ಆರ್ ರಂಗನಾಥನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಗ್ರಂಥಾಲಯದ ಸಹಾಯಕ ದತ್ತಾತ್ರೇಯ ಏವೂರ ಹಾಗೂ ಓದುಗರದ ಹಣಮಂತ ಇಳಕಲ್, ದೇವರಾಜ ಹೆಮನೂರ, ರಾಘವೇಂದ್ರ ಹೆಮನೂರ, ಸವಿತಾ ಮಡಿವಾಳರ, ಅನಿತಾ ಜೆಕೆ, ಹುಲುಗಪ್ಪ ಬಿರಾದರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.