ಸುರಪುರ | ಆತ್ಮನಿರ್ಭರ ಭಾರತ, ಜಿಎಸ್‌ಟಿ ಕುರಿತು ಕಾರ್ಯಾಗಾರ
ಸುರಪುರ: ನಗರದ ಬಿಜೆಪಿ ಕಾರ್ಯಾಲಯದ ಆವರಣದಲ್ಲಿ ಸುರಪುರ ಮಂಡಲದ ವತಿಯಿಂದ ʼಆತ್ಮನಿರ್ಭರ ಭಾರತ ಹಾಗೂ ಜಿಎಸ್‌ಟಿ ಕುರಿತು ಕಾರ್ಯಾಗಾರʼ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜುಗೌಡ ಅವರು ಮಾತನಾಡಿ, “ನಮ್ಮ ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತದ ಕಾರ್ಯಕ್ರಮದ ಮೂಲಕ ದೇಶದ ಜನರ ಏಳಿಗೆಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಮುಂಬರುವ ದಿನಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾರಿಗೊಳಿಸಿರುವ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ವಿವರಿಸುವ ಮೂಲಕ ಪಕ್ಷದ ಎಲ್ಲಾ ಕಾರ್ಯಕರ್ತರನ್ನು ತೊಡಗಿಸುವುದಕ್ಕೆ ನಾವು ಪ್ರಯತ್ನಿಸುತ್ತೇವೆ. ಜೊತೆಗೆ ಜಿಎಸ್‌ಟಿ ಕಡಿತದ ಕಾರಣದಿಂದ ದೇಶದ ಜನರಿಗೆ ಲಾಭವಾಗಿದ್ದು, ಇದು ಸಂವಿಧಾನಿಕ ಹಾಗೂ ಆರ್ಥಿಕ ಹಿತಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಪ್ಪ ಗುಳಗಿ ಸೇರಿದಂತೆ ಅನೇಕರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ), ಯಲ್ಲಪ್ಪ ಕುರಕುಂದಿ, ಹೆಚ್ ಸಿ ಪಾಟೀಲ್, ರಾಜಾ ಮುಕುಂದ ನಾಯಕ,ನಗರಸಭೆ ಸದಸ್ಯ ನರಸಿಂಹ ಕಾಂತ ಪಂಚಮಗಿರಿ, ಎಸ್.ಎನ್ ಪಾಟೀಲ್,ಬಲಭೀಮ ನಾಯಕ ಬೈರಿಮಡ್ಡಿ,ಪ್ರಕಾಶ ಸಜ್ಜನ್, ತಿಪ್ಪರಾಜು ಬಾಚಿಮಟ್ಟಿ ವಿಜಯಕುಮಾರ ಮಂಗಿಹಾಳ ಭೀಮಾಶಂಕರ ಬಿಲ್ಲವ್, ಶರಣಯ್ಯ ಮಠಪತಿ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿದ್ದರು