×
Ad

ಸುರಪುರ | ತಾಲ್ಲೂಕು ಆಡಳಿತದ ವತಿಯಿಂದ ನುಲಿಯ ಚಂದಯ್ಯನ ಜಯಂತಿ ಆಚರಣೆ

ಕಾಯಕಕ್ಕೆ ಮಹತ್ವ ನೀಡಿದವರು ಮಹಾ ಶರಣ ನುಲಿಯ ಚಂದಯ್ಯ : ತಹಶೀಲ್ದಾರ್ ಹುಸೇನಸಾಬ್

Update: 2025-08-09 21:46 IST

ಸುರಪುರ: 12ನೇ ಶತಮಾನದ ಶರಣರಲ್ಲಿ ನುಲಿಯ ಚಂದಯ್ಯನವರು ಕಾಯಕದ ಮಹತ್ವದ ಮೂಲಕ ಎಲ್ಲರಿಗೂ ಚಿರಪರಿಚಿತ ಶರಣರಾಗಿದ್ದರು ಎಂದು ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್ ತಿಳಿಸಿದರು.

ನಗರದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕುಳವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಖಂಡಪ್ಪ ಭಜಂತ್ರಿ, ರಾಜ್ಯ ಸಮಿತಿ ಸದಸ್ಯ ಭೀಮರಾಯ ಭಜಂತ್ರಿ ರಂಗಂಪೇಟೆ, ಯಲ್ಲಪ್ಪ ಭಜಂತ್ರಿ ಪ್ರ.ಕಾರ್ಯದರ್ಶಿ, ನಿಂಗಪ್ಪ ಭಜಂತ್ರಿ ಹೆಮನೂರ, ವೆಂಕಟೇಶ ಭಜಂತ್ರಿ ಸುರಪುರ, ಭೀಮಣ್ಣ ಭಜಂತ್ರಿ ಲಕ್ಷ್ಮಿಪುರ, ಭೀಮಣ್ಣ ಭಜಂತ್ರಿ ಶೈಲಿಗು ಸೇರಿದಂತೆ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News