×
Ad

ಸುರಪುರ | ಹಸನಾಪುರ ದೊಡ್ಡ ಬಜಾರದಲ್ಲಿ ಆಸ್ಪತ್ರೆ ಆರಂಭಿಸಲು ಕರವೇ ಮನವಿ

Update: 2024-12-26 18:21 IST

ಯಾದಗಿರಿ : ಸುರಪುರ ನಗರದ ಹಸನಾಪುರ ದೊಡ್ಡ ಬಜಾರದಲ್ಲಿ ಸರ್ಕಾರಿ ಆಸ್ಪತ್ರೆ ಆರಂಭಿಸಲು ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘಟನೆ ತಾಲ್ಲೂಕು ಅಧ್ಯಕ್ಷ ನಿಂಗಪ್ಪ ನಾಯಕ ಬಿಜಾಸಪುರ ಮಾತನಾಡಿ, ಸುರಪುರ ನಗರ 31 ವಾರ್ಡ್ ಗಳನ್ನು ಒಳಗೊಂಡಿದೆ, ಅಲ್ಲದೆ ಸುರಪುರದಲ್ಲಿ ರಂಗಂಪೇಟೆ, ಹಸನಾಪುರವೂ ದೊಡ್ಡ ಪ್ರದೇಶವಾಗಿದ್ದು, ಹಸನಾಪುರ ದೊಡ್ಡ ಬಜಾರಕ್ಕೆ ನಿತ್ಯವು ವಿವಿಧ ಗ್ರಾಮಗಳಿಂದ ಜನರು ವಸ್ತುಗಳ ಖರಿದಿಗಾಗಿ ಬರುತ್ತಾರೆ. ಆದರೆ ಇಲ್ಲಿ ಯಾವುದೇ ಆಸ್ಪತ್ರೆ ಇಲ್ಲದ್ದರಿಂದ ಜನರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ತೊಂದರೆ ಪಡುವ ಸ್ಥಿತಿ ಇದೆ, ಆದ್ದರಿಂದ ಹಸನಾಪುರ ದೊಡ್ಡ ಬಜಾರದಲ್ಲಿ ಆಸ್ಪತ್ರೆಯನ್ನು ಆರಂಭಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣ ದಿಂದ ಆಗ್ರಹಿಸುವುದಾಗಿ ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಬರೆದ ಮನವಿಯನ್ನು ಕಚೇರಿ ಸಿರಸ್ತೆದಾರರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಉಪಾಧ್ಯಕ್ಷ ವಿರೇಶ ರುಮಾಲಮಠ, ನಗರ ಘಟಕ ಅಧ್ಯಕ್ಷ ನಿಂಗಣ್ಣ ಪಾಟೀಲ್, ತಾ.ಸಂ.ಕಾರ್ಯದರ್ಶಿ ಮಹ್ಮದ್ ಹಸನ್ ಪಟೇಲ್, ಬಸಲಿಂಗಪ್ಪ ಕರಡಿ, ಎಮ್.ಡಿ.ಆಸೀಫ್ ಸೇರಿದಂತೆ ಇತರರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News