ಸುರಪುರ | ಅಂಬೇಡ್ಕರ್ ವೃತ್ತದ ಧರಣಿಗೆ ಕರ್ನಾಟಕ ರಾಷ್ಟ್ರ ಪಕ್ಷ ಬೆಂಬಲ
ಸುರಪುರ: ಡಾ.ಅಂಬೇಡ್ಕರ್ ಹೆಸರಲ್ಲಿ ಗ್ರಂಥಾಲಯ, ಸಾಂಸ್ಕೃತಿಕ ಭವನ, ಮತ್ತು ಉದ್ಯಾನವನ ವನ್ನು ನಿರ್ಮಾಣ ಮಾಡಲು ನಗರದ ಅಂಬೇಡ್ಕರ್ ವೃತ್ತದ ಹಿಂಭಾಗದಲ್ಲಿರುವ ಸರ್ವೇ ನಂಬರ್ 7/1 ರಲ್ಲಿನ ಖಾರಿಜ್ ಖಾತಾ ಭೂಮಿ ನೀಡುವಂತೆ ಸರಕಾರಕ್ಕೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಶನಿವಾರ ಮಧ್ಯಾಹ್ನ ಕೆಆರ್‌ಎಸ್ ಪಕ್ಷ ದಿಂದ ಬೆಂಬಲ ವ್ಯಕ್ತಪಡಿಸಿ ಪಕ್ಷದ ರಾಜ್ಯ ಕಾರ್ಯದರ್ಶಿ ಮತ್ತು ಯಾದಗಿರಿ ಜಿಲ್ಲೆಯ ಉಸ್ತುವಾರಿ ದೀಪಾ ಮನೂರು ಮತ್ತು ಜಿಲ್ಲಾ ಕಾರ್ಯಾದರ್ಶಿ ನಿರೂಪಾದಿ ಕೆ ಬೋಮರ್ಶಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾನಪ್ಪ ಕಟ್ಟಿಮನಿ, ವೆಂಕಟೇಶ್ ಹೊಸಮನಿ, ನಾಗಣ್ಣ ಕಲ್ಲದೇವನಹಳ್ಳಿ, ಶ್ರೀನಿವಾಸ ನಾಯಕ ಬೊಮ್ಮನಹಳ್ಳಿ, ಮಾನಪ್ಪ ಕರಡಕಲ, ರಾಹುಲ್ ಹುಲಿಮನಿ, ಮಾನಪ್ಪ ಬಿಜಾಸಪೂರ, ಚಂದ್ರಶೇಖರ್ ಕಟ್ಟಿಮನಿ, ನಿಂಗಣ್ಣ ದೇವರಗೋನಾಲ್, ಮೂರ್ತಿ ಬೊಮ್ಮನಹಳ್ಳಿ, ಮಾನಪ್ಪ ಶೆಳ್ಳಗಿ, ವಿರಭದ್ರ ತಳವಾರಗೇರಾ, ಶಿವಶಂಕರ ಹೊಸಮನಿ , ತಿಪ್ಪಣ್ಣ ಶೆಳ್ಳಗಿ,ರಾಜು ದೊಡ್ಡಮನಿ, ಹಣಮಂತ ಪಟ್ಟೆದಾರ, ಮಹಾದೇವ ದೇವಾಪುರ, ರಾಜೂ ಬಡಿಗೇರ, ಮಲ್ಲಪ್ಪ ದೊಡ್ಡಮನಿ, ಚಂದಪ್ಪ ಪಂಚಮ್, ಬಸವರಾಜ ದೊಡ್ಡಮನಿ, ಮಲ್ಲು ಮುಷ್ಠಳ್ಳಿ, ಹಣಮಂತ ರತ್ತಾಳ, ಸಂತೋಷ ಸಗರ, , ಹಣಂತ ತೇಲ್ಕರ್, ಮಹೇಶ ಯಾದಗಿರ, ನಾಗರಾಜ ಬೇವಿನಗಿಡ, ಅವಿನಾಶ ಹೊಸಮನಿ, ಹಣಮಂತ ಕೊಡ್ಲಿ ಇತರರು ಬಾಗವಹಿಸಿದ್ದರು.