ತಿಂಥಣಿ | ಜೈವಿಕ ಇಂಧನ ಉದ್ಯಾನಕ್ಕೆ ಎಸ್.ಸುಧೀಂದ್ರ ಭೇಟಿ
ಸುರಪುರ: ತಾಲೂಕಿನ ತಿಂಥಣಿ ಗ್ರಾಮದ ಬಳಿಯ ಜೈವಿಕ ಇಂಧನ ಉದ್ಯಾನಕ್ಕೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರಿನ ಅಧ್ಯಕ್ಷ ಎಸ್.ಇ.ಸುಧೀಂದ್ರ ಅವರು ಭೇಟಿ ನೀಡಿ, ಜೈವಿಕ ಇಂಧನ ಉತ್ಪಾದನೆ ಹಾಗೂ ಬಳಕೆ ಬಗ್ಗೆ ರೈತ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ಕೇರೋಸಿನ್ ಯಾವ ರೀತಿಯಲ್ಲಿ ಮನೆ ಮನೆಗೆ ತಲುಪಿಸುತ್ತವೆ. ಅದೇ ಮಾದರಿಯಲ್ಲಿ ಬೈಯೋಡಿಸೈಲ್ ಕೂಡ ಮನೆ ಮನೆಗೆ ತಲುಪಿಸಲು ಪ್ರಯತ್ನ ಮಾಡಲಾಗುವುದು ಎಂದರು.
ಬಿ -100 ಗುಣಮಟ್ಟದಲ್ಲಿ ಜೈವಿಕ ಡಿಸೈಲ್ ಎಲ್ಲಾ ವಾಹನಗಳಿಗೆ ಬಳಸಬಹುದು. ಇದೆ ವಿಷಯವನ್ನು ಅಧಿವೇಶನದಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುವು. ಅಲ್ಲದೆ ಶೀಘ್ರದಲ್ಲಿ ನೋಟಿಫಿಕೇಶನ್ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಡಾ ಶ್ಯಾಮರಾವ ಕುಲಕರ್ಣಿ ಸಂಯೋಜಕರು ಇವರು ಜೈವಿಕ ಇಂಧನ ಉಧ್ಯಾನದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ರೈತರಾದ ದೇವರೆಡ್ಡಿ ಹಾಲು ಒಕ್ಕೂಟದ ಹಾಗೆ ಹೊಂಗೆ ಬೀಜಗಳನ್ನು ಸಂಗ್ರಹಮಾಡಿದಲ್ಲಿ ಇನ್ನೂ ಜೈವಿಕ ಇಂಧನ ಉತ್ಪಾದನೆ ಹೆಚ್ಚಿಗೆ ಆಗಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಇನ್ನೊರ್ವ ಪ್ರಗತಿಪರ ರೈತರಾದ ಗಂಗಾಧರ ನಾಯಕ ಮಾತನಾಡಿ, ಜೈವಿಕ ಇಂಧನ ಉಧ್ಯಾನ ಸಿಬ್ಬಂದಿ ಇವರು ಹಳ್ಳಿ ಹಳ್ಳಿಗಳಿಗೆ ಹೋಗಿ ಜೈವಿಕ ಇಂಧನ ಮಹತ್ವದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ, ಮಂಡಳಿಯಿಂದ ಇನ್ನೂ ಹೆಚ್ಚಿನ ಅನುದಾನ ದೊರಕಿದಲ್ಲಿ ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಕೂಲವಾಗುತ್ತದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಂಡಿ ಆಸಾದ್, ಸೋಮರಾಯ ಡಿ.ಜಿ., ಹನುಮಂತರಾಯ ಬಿರಾದಾರ, ಚನ್ನಾರೆಡ್ಡಿ, ರತ್ನರಾಜ್ ಸಾಲಿಮನಿ, ಸೋಮಣ್ಣ ಹಾಲಬಾವಿ, ಬಸವರಾಜ ರಾಮದುರ್ಗ, ವೆಂಕಟೇಶ್ ಹಾವಿನಾಳ, ಭೀಮಣ್ಣ ಹುಣಸಿಹೊಳಿ, ದವಲಸಾಬ್ ಸೇರಿದಂತೆ ಅನೇಕರು ಉಪಸ್ಥಿರಿದ್ದರು.