ಯಾದಗಿರಿ| ಮದುವೆ ಮೆರವಣಿಗೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯನಿಂದ ಫೈರಿಂಗ್
Update: 2025-12-06 20:51 IST
ಯಾದಗಿರಿ: ಮದುವೆ ಮೆರವಣಿಗೆಯಲ್ಲಿ ಮುಂಡರಗಿ ಗ್ರಾಮ ಪಂಚಾಯತ್ ಸದಸ್ಯ, ರೌಡಿಶೀಟರ್ ಚಂದ್ರಶೇಖರ್ ಡಬಲ್ ಬ್ಯಾರೆಲ್ ಗನ್ ನಿಂದ ಫೈರಿಂಗ್ ಮಾಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಸಿದ್ದಾಪುರ ಗ್ರಾಮದ ಮದುವೆ ಕಾರ್ಯಕ್ರಮವೊಂದರಲ್ಲಿ ಘಟನೆ ನಡೆದಿದೆ. ಚಂದ್ರಶೇಖರ್ ಮದುವೆ ಮೆರವಣಿಗೆಯಲ್ಲಿ ಫೈರಿಂಗ್ ಮಾಡುತ್ತಾ ಡ್ಯಾನ್ಸ್ ಮಾಡಿ ಅಲ್ಲಿದ್ದವರಲ್ಲಿ ಭಯಹುಟ್ಟಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.