×
Ad

ವಡಗೇರಾ | ನೊಂದವರಿಗೆ ನ್ಯಾಯ ಕೊಡಿಸಿ : ಇಕ್ಬಾಲ್ ಕಾಸಿಂ

Update: 2025-09-01 19:29 IST

ವಡಗೇರಾ: ಕಾನೂನು ಪದವಿ ಓದಲು ಹೆಚ್ಚಿನ ವಿದ್ಯಾರ್ಥಿಗಳು ಬಯಸುತ್ತಿದ್ದಾರೆ. ಆದರೆ, ಕಪ್ಪು ಕೋಟು ಧರಿಸಿ ನ್ಯಾಯಾಲದಲ್ಲಿ ಸೂಕ್ತ ಸಾಕ್ಷಿಗಳನ್ನು ಕಲೆ ಹಾಕಿ ಕೇಸ್‌ ವಾದಿಸುವುದು ಇತ್ತೀಚೆಗೆ ತುಂಬಾ ಕಷ್ಟದ ಕೆಲಸವಾಗಿದೆ ಎಂದು ಜವಾಹರ್ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಇಕ್ಬಾಲ್ ಕಾಸಿಂ ಕಳವಳ ವ್ಯಕ್ತಪಡಿಸಿದರು.

ವಡಗೇರಾ ತಾಲೂಕಿನ ಕುಮನೂರು ಗ್ರಾಮದಲ್ಲಿ ಪ್ರಥಮ ಬಾರಿಗೆ ಕಾನೂನು ಪದವಿ ಪಡೆದ ಬಾಬು ಎಸ್ ಪೊಲೀಸ್ ಪಟೇಲ್ ಅವರಿಗೆ ಗ್ರಾಮಸ್ಥರಿಂದ ಸನ್ಮಾನ ಕಾರ್ಯಕ್ರಮದ ವೇಳೆ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ವಕೀಲ ಬಾಬು ಎಸ್.ಪೊಲೀಸ್ ಪಟೇಲ್, ನಿಮ್ಮ ಈ ಪ್ರೀತಿ, ವಿಶ್ವಾಸಕ್ಕೆ ನಾನು ಅಭಾರಿಯಾಗಿದ್ದೇನೆ,  ನಾನು ಬಡತನದಲ್ಲೇ ವಕೀಲ ಪದವಿ ಓದು ಮುಗಿಸಿದ ವ್ಯಕ್ತಿ, ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಆದ ಅನ್ಯಾಯವನ್ನು ನಾನು ಬಹಳ ಹತ್ತಿರದಿಂದ ನೋಡಿದವನು. ಬಡ ಜನರಿಗೆ ನ್ಯಾಯ ಕೊಡಸಬೇಕು ಎಂಬ ಹಂಬಲದಿಂದ ನಾನು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದರು.

ಕಾರ್ಯಕ್ರಮ ವೇಳೆ ಶಿಕ್ಷಕರಾದ ಮುದಕ್ಕಪ್ಪ, ಹಜರತ್ ಮೊಸಿನ್ ಸಾಹೇಬ್, ಖಾದ್ರಿ ಹುಲಿಕಲ್ ಜೆ., ಫಯಾಝ್‌ ಸಾಬ್ ಕೊರೇಶಿ, ಮಲ್ಲಿಕಾರ್ಜುನ, ಕುಮಲಯ್ಯ, ಮರಿಲಿಂಗಪ್ಪ, ಚಾಂದ್ ಪಟೇಲ್, ಸಲೀಂಪಾಷ್, ಕುಮಲಪ್ಪ, ಮಕದ್ದುಮ್ ಸಾಬ್, ಲತೀಫ್‌ ಸಾಬ್, ಲಾಲ್ ಅಹ್ಮದ್ ಪೊಲೀಸ್ ಸೇರಿದಂತೆ ಇನ್ನಿತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News