×
Ad

ಯಾದಗಿರಿ | ಕುಟುಂಬದ ಸದಸ್ಯರಿಂದಲೇ ನಡೆಯುವ ದೌರ್ಜನ್ಯ ವಿರುದ್ದ ಹೋರಾಡಲು ಮಹಿಳೆಯರಿಗೆ ಅಗತ್ಯ ಅರಿವು ಬೇಕು; ನ್ಯಾ.ಮರಿಯಪ್ಪ

Update: 2025-03-04 19:52 IST

ಯಾದಗಿರಿ : ಕೌಟುಂಬಿಕ ಹಿಂಸೆಯಿಂದಿಂದ ಮಹಿಳೆಯರಿಗೆ ರಕ್ಷಣೆ ಎಂಬ ಕಾನೂನು 2006 ರಿಂದ ಜಾರಿಗೆ ಬಂದಿದ್ದು, ಕುಟುಂಬದ ಸದಸ್ಯರಿಂದಲೇ ನಡೆಯುವ ದೌರ್ಜನ್ಯ ಹಾಗೂ ಹಿಂಸೆಗಳ ವಿರುದ್ದ ಹೋರಾಡಲು ಮಹಿಳೆಯರಿಗೆ ಅಗತ್ಯ ಅರಿವು ಬೇಕು ಎಂದು ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌರವಾನ್ವಿತ ಮರಿಯಪ್ಪ ಅವರು ಹೇಳಿದರು.

ಯಾದಗಿರಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರಿ ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ನಿಯಮ 2006ರ ಅನುಷ್ಟಾನ ಕುರಿತು ಸಂರಕ್ಷಣಾಧಿಕಾರಿಗಳು ಹಾಗೂ ಭಾಗೀದಾರರ ಇಲಾಖೆಗಳಿಗೆ ಓರಿಂಟೇಶನ್ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರ ಕಷ್ಟಕರ ಪರಿಸ್ಥಿಯಲ್ಲಿ ಮಹಿಳಾ ಸಹಾಯವಾಣಿ 181 ಕರೆ ಮಾಡಬಹುದು ಮತ್ತು ಜಿಲ್ಲೆಯಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಮಾನತೆಯನ್ನು ತರಬೇಕು. ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರನ್ನು ಗೌರವಿಸಬೇಕು ಮತ್ತು ಸಮಾಜಿಕ ಸ್ಥಳಗಳಲ್ಲಿ ಮಹಿಳೆಯರನ್ನು ಸಮಾನತೆಯಿಂದ ನೋಡಬಹುದು ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಲಿಂಗತಾರತಮ್ಯ ಮೂಲಕ ಭದ್ರಗೊಳಿಸುವುದು, ಮಹಿಳೆಯರು ಬದುಕುನಿಂದ ಸುಧಾರಣೆಯನ್ನು ತರಬಹುದಾಗಿದೆ. ಕೌಟುಂಬಿಕ ಹಿಂಸೆಯಿಂದ ಮಹಿಳೆಯರಿಗೆ ತೊಂದರೆಯಾದರೆ ಅವರಿಗೆ ಇರುವ ಪರಿಹಾರಗಳನ್ನು ನೀಡುವ ಕಾಯ್ದೆಗಳ ಬಗ್ಗೆ ತಿಳಿಸಬೇಕು ಎಂದು ಹೇಳಿದರು.

ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ವೀರನಗೌಡ ಪಾಟೀಲ್ ಮಾತನಾಡಿ, ಮಹಿಳೆಯರು ಶಿಕ್ಷಣದಿಂದ ವಂಚಿತರಾದಲ್ಲಿ ದೌರ್ಜನ್ಯಕ್ಕೆ ಒಳಗಾಗಬಹುದು, ಈ ಹಿನ್ನಲೆಯಲ್ಲಿ ಉತ್ತಮ ಶಿಕ್ಷಣ ಸಂಸ್ಕಾರ ಹಾಗೂ ಸ್ವಯಂ ರಕ್ಷಣೆ, ಕುಟುಂಬದಲ್ಲಿ ಅನ್ಯೊನ್ಯತೆಯ ಜೀವನದ ಬಗ್ಗೆ ತಿಳಿ ಹೇಳಬೇಕು. ಮಹಿಳೆಯರು ಕೂಡ ಅವಿಭಕ್ತ ಕುಟುಂಬ ವ್ಯವಸ್ಥೆ ಮುಂಚೂಣಿಯಲ್ಲಿ ತರಬೇಕು ಇದರಿಂದ ಕೌಟುಂಬಿಕ ದೌರ್ಜನ್ಯ ನಿವಾರಿಸಲು ಸಾಧ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಿಳಾ ಅಭಿವೃದ್ಧಿ ಅಧಿಕಾರಿಗಳು ಪ್ರಮ್ ಮೂರ್ತಿ, ಸಾವಿತ್ರಿ ಪಾಟೀಲ್, ಯಾದಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವನಜಾಕ್ಷೀ, ತರಬೇತಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳು, ಪೋಲಿಸ್ ಇಲಾಖೆ ಸಿಬ್ಬಂದಿ ವರ್ಗದವರು, ಇತರೆ ಇಲಾಖೆಯ ಸಿಬ್ಬಂದಿವರ್ಗದವರು ತರಬೇತಿ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News