×
Ad

ಯಾದಗಿರಿ | ದೇಶ ಕಟ್ಟುವಲ್ಲಿ ಇಂಜಿನಿಯರ್ ಗಳ ಪಾತ್ರ ಮುಖ್ಯವಾಗಿದೆ : ಡಿಸಿ ಬೋಯರ್

Update: 2025-09-14 21:24 IST

ಯಾದಗಿರಿ: ದೇಶ ಕಟ್ಟುವಲ್ಲಿ ಇಂಜಿನಿಯರ್ ಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಹೇಳಿದರು.

ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಅಸೋಸಿಯೇಶನ್ ಪದಾಧಿಕಾರಿಗಳು ಹಾಗೂ ಅಧ್ಯಕ್ಷ ಭೀಮಣ್ಣಗೌಡ ಕ್ಯಾತನಾಳ್ ನೇತೃತ್ವದಲ್ಲಿ ಭಾನುವಾರ ಸರ್ಕಾರಿ‌ ಪದವಿ ಕಾಲೇಜಿನ ಹತ್ತಿರ ಆಯೋಜಿಸಿದ್ದ ಮ್ಯಾರಾಥಾನಗೆ ಅವರು ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಶಿಕ್ಷಕರು ಶಿಲ್ಪಿಯಾದರೇ ಇಂಜಿನಿಯರ್ ಗಳು ರಸ್ತೆ, ಕಟ್ಟಡ, ಸೇತುವೆ, ಆಣೆಕಟ್ಟು ಹೀಗೆ ಅಗತ್ಯ ಸೌಲಭ್ಯಗಳನ್ನು ತಮ್ಮ ಜ್ಞಾನದ ಮೂಲಕ ಕಾರ್ಯರೂಪಕ್ಕೆ ತರುವ ದೇಶದ ಶಿಲ್ಪಿಗಳಾಗಿದ್ದಾರೆಂದು ಡಿಸಿ ಬಹುಮಾರ್ಮಿಕವಾಗಿ ನುಡಿದರು.

ನಂತರ ಆರಂಭವಾದ ಮ್ಯಾರಾಥಾನ್ ಪದವಿ ಕಾಲೇಜು, ನೇತಾಜಿ ಚೌಕ್, ಶಾಸ್ತ್ರಿ ಸರ್ಕಲ್, ಲುಂಬಿನಿ ಗಾರ್ಡ್, ಹೋಸಳ್ಳಿ ಕ್ರಾಸ್ ಮಾರ್ಗವಾಗಿ, ಹೊಸ್ ಬಸ್ ಮುಖಾಂತರ, ಪಂಚಾಯತ್‌ ರಾಜ್ ಕಚೇರಿಗೆ ಆಗಮಿಸಿತು.

ಈ ವೇಳೆ ಅಲ್ಲಿನ ವಿಶ್ವೇಶ್ವರಯ್ಯ ಅವರ ಭಾವ ಚಿತ್ರಕ್ಕೆ ಮಾರ್ಲಾಣೆ ಮಾಡಿದ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಅಧ್ಯಕ್ಷ ಭೀಮಣ್ಣಗೌಡ ಕ್ಯಾತನಾಳ ಮಾತನಾಡಿದರು.

ಈ ಸಂದರ್ಭದಲ್ಲಿ ಐಎಮ್ ಎ ಅಧ್ಯಕ್ಣ ಡಾ.ಪೂಜಾರಿ, ಡಾ.ವೀರೇಶ ಜಾಕಾ, ಡಾ. ಪ್ರಸನ್ನ, ಶಿಕ್ಷಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ, ಬಸವರಾಜ ಬಿಆರ್ ಸಿ, ಶರಣಗೌಡ ಭೀಮನಳ್ಳಿ, ಮಲ್ಲಿಕಾರ್ಜುನ ಶಿರಗೋಳ, ಮಲ್ಲಣಗೌಡ ಹಳೆಮನಿ, ತಾಯಪ್ಪ ಯಾದವ, ಇಂಜಿನಿಯರಿಂಗ್ ಗಳಾದ ಬಂಡೆಪ್ಪ ಆಕಳ, ಲಲಿತಾ ಕಣೇಕಲ್, ಮಲ್ಲಿಕಾರ್ಜುನ, ಸಿದ್ದು ಕಾಮರೆಡ್ಡಿ, ಭೀಮರಾಯ ಲಿಂಗೇರಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಮತ್ತು ಲಾಯನ್ಸ ಕ್ಲಬ್ ಸದಸ್ಯರು, ಇಂಜಿನಿಯರಿಂಗ್ ಗಳು ಮತ್ತು ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಅಸೋಸಿಯೇಶನ್ ನ ಪದಾಧಿಕಾರಿಗಳು ಸೇರಿದಂತೆ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News