ಯಾದಗಿರಿ | ನಿವೃತ್ತ ಸರಕಾರಿ ನೌಕರಿಗೆ ಸನ್ಮಾನ
ಯಾದಗಿರಿ : ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ನಿವೃತ್ತರಾದ ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಸಾಮೂಹಿಕ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಂಡಪ್ಪ ಆಕಳ ಮಾತನಾಡಿ, ಸೇವೆಯಲ್ಲಿದ್ದಾಗ ಶಿಸ್ತು, ಪ್ರಮಾಣಿಕತೆ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸಿದ ನೌಕರರು ನಿವೃತ್ತಿಯ ನಂತರವೂ ಸಮಾಜದ ಹಿತಕ್ಕಾಗಿ ಕಾರ್ಯಶೀಲರಾಗಿರುವುದು ಅಪೂರ್ವ ಸಾಧನೆಯಾಗಿದೆ. ಹಿರಿಯ ಅನುಭವಿಗಳ ಶಕ್ತಿಯನ್ನು ಒಗ್ಗೂಡಿಸಿ ಸಾಮಾಜಿಕ ನ್ಯಾಯ, ನೌಕರರ ಹಕ್ಕುಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ನಿವೃತ್ತ ನೌಕರರ ಕಾರ್ಯಶೀಲತೆ ಪ್ರಶಂಸನೀಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿ. ಹಫೀಸ್ ಪಟೇಲ್, ಸಂಘದ ಸದಸ್ಯ ನಾಗೇಂದ್ರಪ್ಪ ಕೆ. ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತರಾದ ಅಜಾಜುಲ್ ಹಕ್, ಮಲ್ಲಿಕಾರ್ಜುನ್, ಶಂಕರ್ ರಾಥೋಡ್, ಇಸ್ಮಾಯಿಲ್ ಪಟೇಲ್, ಮಹಮ್ಮದ್ ಖಾಸಿಂಸಾಬ್ ಹಾಗೂ ಲಕ್ಷ್ಮಣ್ ಜಿಲ್ಲಾಳ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಮಲಿಂಗಪ್ಪ, ಮಲ್ಲಿಕಾರ್ಜುನ್ ಪಾಟೀಲ್, ಈರಣ್ಣ ಗೌಡ, ನಾಗೇಂದ್ರಪ್ಪ, ಶಿವಕುಮಾರ್, ರೇಖಾದೇವಿ, ನಂದಾ ರೆಡ್ಡಿ, ಮಲ್ಲರೆಡ್ಡಿ, ನೆಹರು ಮೈಲಿ, ಮಲ್ಲಿಕಾರ್ಜುನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಂಕರ್ ಸೋಲಾರ್ ಸ್ವಾಗತಿಸಿದರು, ಚಂದ್ರಪ್ಪ ಗೊಂಜನೂರ್ ನಿರೂಪಿಸಿದರು ಹಾಗೂ ಅಲಿ ಸಾಬ್ ವಂದಿಸಿದರು.