×
Ad

ಯಾದಗಿರಿ | ʼಕನ್ನಡ ಪಯಶ್ವಿನಿ ಅಚೀವ್‌ಮೆಂಟ್ ಪ್ರಶಸ್ತಿʼಗೆ ಲಕ್ಷ್ಮೀ ಎಸ್ ಆಯ್ಕೆ

Update: 2026-01-15 20:32 IST

ಯಾದಗಿರಿ : ಅಂತರರಾಜ್ಯ ಮಟ್ಟದ ಪ್ರತಿಷ್ಠಿತ ಕನ್ನಡ ಪಯಶ್ವಿನಿ ಅಚೀವ್‌ಮೆಂಟ್ ಪ್ರಶಸ್ತಿಗೆ ಯಾದಗಿರಿ ಮೂಲದ ಲಕ್ಷ್ಮೀ ಎಸ್. ಅವರು ಆಯ್ಕೆಯಾಗಿದ್ದಾರೆ.

ಸಾಹಿತ್ಯ ಹಾಗೂ ಸಂಘಟನೆ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಮಹತ್ವದ ಮತ್ತು ನಿರಂತರ ಸೇವೆಯನ್ನು ಪರಿಗಣಿಸಿ ಈ ಗೌರವ ಪ್ರದಾನ ಮಾಡಲಾಗುತ್ತಿದೆ.

ಜ.18ರಂದು ಕಾಸರಗೋಡು ಜಿಲ್ಲೆಯ ನುಳ್ಳಿಪಾಡಿಯಲ್ಲಿರುವ ಕನ್ನಡ ಭವನದಲ್ಲಿ ಆಯೋಜಿಸಲಾಗಿರುವ ‘ಕನ್ನಡ ಭವನ ರಜತ ಸಂಭ್ರಮ- ನಾಡು, ನುಡಿ ಹಬ್ಬ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಲಕ್ಷ್ಮೀ ಎಸ್. ಅವರಿಗೆ ಅಂತರರಾಜ್ಯ ಮಟ್ಟದ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದಕ್ಕೆ ದಲಿತ ಸಂಘರ್ಷ ಸಮಿತಿ, ಯಾದಗಿರಿ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇಕರ್ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News