ಯಾದಗಿರಿ | ರೈಲ್ವೆ ಕ್ಷೇತ್ರದ ಅಭಿವೃದ್ಧಿಗೆ 7,560 ಕೋಟಿ ರೂ. ಬಜೆಟ್ ಮೀಸಲು : ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ
ಯಾದಗಿರಿ : ಕರ್ನಾಟಕ ರಾಜ್ಯವು ಪ್ರತಿ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿಯನ್ನು ಕಾಣುತ್ತಿದ್ದು, 2024 -25ನೇ ಸಾಲಿಗೆ 7,560 ಕೋಟಿ ರೂ. ಗಳನ್ನು ರೈಲ್ವೆ ಆಯವ್ಯಯ ಅನುದಾನ ಸಹ ಒದಗಿಸಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ಹೇಳಿದರು.
ಹಜರತ್ ನಿಜಾಮುದ್ದೀನ್ -ಕೆಎಸ್ಆರ್ ಬೆಂಗಳೂರು ರಾಜಧಾನಿ ಎಕ್ಸ್ ಪ್ರೆಸ್ ರೈಲು ,ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ನಿಲುಗಡೆ ಕಾರ್ಯಕ್ರಮದ ಅಂಗವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಅವರು ಮಾತನಾಡಿದರು.
ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಘನ ನೇತೃತ್ವದಲ್ಲಿ ಕರ್ನಾಟಕ ರಾಜ್ಯವು ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಕಾಣುತ್ತಿದೆ. ವಿಶೇಷವಾಗಿ ರೈಲ್ವೆ ಕ್ಷೇತ್ರದ ಅಭಿವೃದ್ಧಿಗಾಗಿ 2024-25 ನೇ ಸಾಲಿಗೆ 7,560 ಕೋಟಿ ರೂ.ಗಳನ್ನು ಒದಗಿಸಿದ್ದು, ಕಳೆದ ನಾಲ್ಕು- ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ರೈಲ್ವೆಜಾಲ ಗಣನೀಯ ಪ್ರಗತಿ ಕಂಡಿದೆ. ಹೊಸ ರೈಲ್ವೆ ಲೈನ್, ವಿದ್ಯುದ್ದೀಕರಣ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ ಎಂದು ಹೇಳಿದರು.
ಮಾನ್ಯ ಪ್ರಧಾನ ಮಂತ್ರಿಗಳ ಮಾರ್ಗದರ್ಶನದಲ್ಲಿ ಮೂರು ಪ್ರಮುಖ ರೈಲ್ವೆ ನಿಲ್ದಾಣಗಳಾದ ಯಾದಗಿರಿ, ರಾಯಚೂರು ಮತ್ತು ಬೀದರ್ ರೈಲ್ವೆ ನಿಲ್ದಾಣಗಳ ವ್ಯಾಪ್ತಿಯಲ್ಲಿ ಅಮೃತ್ ಭಾರತ ನಿಲ್ದಾಣ ಯೋಜನೆಯಡಿ ಪುನರ್ ಅಭಿವೃದ್ಧಿಪಡಿಸಲಾಗಿದೆ. ಎಸ್ ಕಿಲೆಟರ್ಸ್, ಲಿಫ್ಟ್ ಗಳು ಪಾರ್ಕಿಂಗ್, ಶೌಚಾಲಯ ಮೀಟಿಂಗ್ ರೂಮ್, ಪಾದಚಾರಿ ಮೇಲ್ಸೇತುವೆಗಳನ್ನು ಪಾದಚಾರಿಗಳ ಅನುಕೂಲಕ್ಕಾಗಿ ಕಲ್ಪಿಸಲಾಗಿದೆ. ದೇಶಿಯವಾಗಿ ವಿನ್ಯಾಸಗೊಳಿಸಿದ ಒಂದೇ ಭಾರತ ರೈಲು ಕಲಬುರಗಿ ಎಸ್ ಎಂ ವಿ ಟಿ ಹಾಗೂ ಬೆಂಗಳೂರು ಮಾರ್ಗದ ಮಧ್ಯೆ ಸಂಚರಿಸುತ್ತಿದ್ದು, ಯಾದಗಿರಿಯಲ್ಲಿ ನಿಲುಗಡಡೆಗೂ ಸಹ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಜ.28ರಂದು ರಾತ್ರಿ ಹಜರತ್ ನಿಜಾಮುದ್ದೀನ್- ಕೆಎಸ್ಆರ್ ಬೆಂಗಳೂರು ರಾಜಧಾನಿ ಎಕ್ಸ್ ಪ್ರೆಸ್ ರೈಲನ್ನು ಪ್ರಾಯೋಗಿಕವಾಗಿ ಯಾದಗಿರಿಯಲ್ಲಿ ನಿಲುಗಡೆಯಾಗುವ ಕಾರ್ಯಕ್ರಮದ ಸಂದರ್ಭದಲ್ಲಿ ರಾಯಚೂರು ಸಂಸದ ಜಿ.ಕುಮಾರ್ ನಾಯಕ್, ಯಾದಗಿರಿ ನಗರ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಗುರುಮಿಟ್ಕಲ್ ಶಾಸಕರಾದ ಶರಣಗೌಡ ಕಂದಕೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿಪಾಟೀಲ್, ನಗರಸಭೆ ಅಧ್ಯಕ್ಷ ಲಲಿತಾ ಅನಪುರ, ರಾಮಕೃಷ್ಣ, ಡಿ ಆರ್.ಎಂ (ಪ್ರಭಾರಿ) ಮತ್ತು ಗುಂತಕಲ್ ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.