×
Ad

ಯಾದಗಿರಿ | ಲಿಂ.ವೀರಭದ್ರಪ್ಪ ನಿಷ್ಠಿಯವರ 99ನೇ ಜನ್ಮದಿನೋತ್ಸವ, ಪ್ರವಚನ ಕಾರ್ಯಕ್ರಮ

Update: 2025-06-26 21:47 IST

ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಲಿಂಗೈಕ್ಯ ವೀರಪ್ಪ ನಿಷ್ಠಿಯವರ 99ನೇ ಜನ್ಮದಿನದ ಪ್ರಯುಕ್ತ ವಿಶೇಷ ಪ್ರವಚನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿಗಳು ಹಾಗೂ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಸಂಸ್ಥಾಪಕರಾದ ಶರಣಬಸಪ್ಪ ವ್ಹಿ ನಿಷ್ಠಿಯವರು ವಹಿಸಿದ್ದರು.

ಪ್ರವಚನ ನೀಡಿದ ಶರಣಬಸವ ಸ್ವಾಮಿಜೀ ಚರಂತೇಶ್ವರ ವಿರಕ್ತ ಮಠ ಬಸವಬೆಳವಿ ಅವರು ಮಾತನಾಡಿ, ವೀರಪ್ಪ ನಿಷ್ಠಿ ಕಡ್ಲಪ್ಪ ನಿಷ್ಠಿಯವರು ಸುರಪುರ ಸಂಸ್ಥಾನದ ಅಭಿವೃದ್ಧಿಗಾಗಿ ಪಣ ತೋಟ್ಟು ನಿಂತವರು. ಜೇವರ್ಗಿಯ ಶ್ರೀ ಷಣ್ಮುಖ ಶಿವಯೋಗಿಗಳ ಆಶೀರ್ವಾದದಿಂದ ಸುರಪುರ ಸಂಸ್ಥಾನದ ಪ್ರಧಾನಿಯಾದರು. ಮತ್ತು ಸಗರ ನಾಡಿನಲ್ಲಿ ನೂರಾರು ಕೆರೆ-ಬಾವಿ, ಮಠ-ಮಂದಿರಗಳನ್ನು ನಿರ್ಮಾಣ ಮಾಡಿ ನಿರಂತರವಾಗಿ ತಮ್ಮ ಇಷ್ಟಲಿಂಗ ಪೂಜೆ ಮಾಡಿಕೊಳ್ಳುವುದರ ಮೂಲಕ ಇತರ ವ್ಯಕ್ತಿಗಳಿಗೆ ಈ ಇಬ್ಬರು ಮಾದರಿಯಾದವರು ಎಂದರು.

ಅಧ್ಯಕ್ಷತೆ ವಹಿಸಿದ್ದ ಶರಣಬಸಪ್ಪ ವ್ಹಿ ನಿಷ್ಠಿಯವರು ಮಾತನಾಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಶಾಂತಲಾ ಎಸ್ ನಿಷ್ಠಿ, ಕಾರ್ಯದರ್ಶಿಗಳು ವೀರಪ್ಪ ನಿಷ್ಠಿ, ತಾಂತ್ರಿಕ ಮಹಾವಿದ್ಯಾಲಯ ಸುರಪುರ, ಕೃಷ್ಣ ಸುಬೇದಾರ ಪಿಎಸ್‌ಐ, ಬಸವರಾಜ ಜಮದ್ರಖಾನಿ, ಬಸವರಾಜ ನಿಷ್ಠಿ ದೇಶಮುಖ, ಲಕ್ಷ್ಮಣ ನಾಯಕ, ವೀರೇಶ ಪಂಚಾಂಗ ಮಠ, ಸೂಗುರೇಶ ವಾರದ, ಶಾಂತಪ್ಪ ಬೂದಿಹಾಳ ಹಾಗೂ ಪ್ರಾಚಾರ್ಯ ಡಾ.ಶರಣಬಸವಪ್ಪ ಸಾಲಿ ಉಪಸ್ಥಿತರಿದ್ದರು.

ವಿವಿಧ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಮೋಹನ ರೆಡ್ಡಿ ದೇಸಾಯಿ ಕಿರದಳ್ಳಿ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News