ಯಾದಗಿರಿ | ಮಹಾನ್ ವ್ಯಕ್ತಿಗಳ ಆದರ್ಶ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ : ಡಾ.ಉಪೇಂದ್ರ ನಾಯಕ್
ಯಾದಗಿರಿ: ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ನಂತರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಡಿ.ದೇವರಾಜ್ ಅರಸು ಭವನ ಸುರಪುರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ʼಮಾನವೀಯ ಮೌಲ್ಯಗಳು ಮತ್ತು ನೈತಿಕತೆʼ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಪ್ರಭು ಕಾಲೇಜಿನ ಉಪನ್ಯಾಸಕ ಡಾ.ಉಪೇಂದ್ರ ನಾಯಕ್ ಸುಬೇದಾರ್ ಉಪನ್ಯಾಸ ನೀಡಿ, ಉತ್ತಮ ವ್ಯಕ್ತಿತ್ವ ಮತ್ತು ನಡತೆಯೇ ಜೀವನದ ಅಮೂಲ್ಯ ರತ್ನವಾಗಿಸಿಕೊಳ್ಳಲು ಮಹಾಮೇಧಾವಿಗಳಾದ ಡಾ.ಬಿ.ಆರ್.ಅಂಬೇಡ್ಕರ್ ಡಾ.ಎಪಿಜೆ ಅಬ್ದುಲ್ ಕಲಾಂ, ನೇತಾಜಿ ಸುಭಾಷ್ ಚಂದ್ರ ಬೋಸ್ ಮುಂತಾದ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಡತೆಯುಳ್ಳ ವ್ಯಕ್ತಿಗಳಾಗುವಂತೆ ಕರೆ ಕೊಟ್ಟರು.
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ತಿಪ್ಪಾರೆಡ್ಡಿ ಮಾಲಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು ,ರಮೇಶ್ ಸ್ವಾಗತಿಸಿದರು, ರಾಜೇಂದ್ರ ವಂದಿಸಿದರು. ವಸತಿ ನಿಲಯಗಳ ನಿಲಯ ಪಾಲಕರಾದ, ಶಾಂತಾಬಾಯಿ, ವೆಂಕಪ್ಪ ಟಣಕೆದಾರ್, ಹನುಮೇಗೌಡ, ಮಲ್ಲಿಕಾರ್ಜುನ್ ನಾಯ್ಕೋಡಿ, ನಾಗೇಶ್, ನೀಲಮ್ಮ ,ರೂಪಾವತಿ ,ಮಹದೇವಿ , ನಾಗಪ್ಪ ಕೊಡೆಕಲ್, ವೆಂಕಟೇಶ್, ಅನಾರಕಲಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.