ಯಾದಗಿರಿ | ಅಹಲ್ಯಾಬಾಯಿ ಹೋಲ್ಕರ್ ಜಯಂತಿ ಆಚರಣೆ
ಯಾದಗಿರಿ : ಸುರಪುರ ನಗರದ ಶರಣಬಸವ ಪಬ್ಲಿಕ್ ಸ್ಕೂಲ್ ಮತ್ತು ವಸತಿ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸಮಾಜಿಕ ಸಾಮರಸ್ಯ ವೇದಿಕೆ ಯಾದಗಿರಿ ಅವರ ಸಂಯೋಗದಲ್ಲಿ ಅಹಲ್ಯಾಬಾಯಿ ಹೋಲ್ಕರ್ ರವರ 300ನೇ ಜಯಂತಿ ಹಾಗೂ ಡಾ.ಮಲ್ಲಿಕಾರ್ಜುನ ವೀನಿಷ್ಠಿ ಜಾಗೀರದಾರ ರವರ 71ನೇ ಜನ್ಮದಿನಾಚಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾದ ಡಾ.ಅಮರಮ್ಮ ನಾವದಗಿ ಮಾತನಾಡಿ, ರಾಜಮಾತೆ ಅಹಲ್ಯಾಬಾಯಿ ಹೋಲ್ಕರ್ ರವರ ಜೀವನ ಚರಿತ್ರೆ ಹಾಗೂ ಸ್ತ್ರೀ ಜಾಗೃತ ಪರವಾದ ಹೋರಾಟಗಳು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಅವರು ಮಾಡಿದ ಮಹತ್ತರ ಕೆಲಸಗಳು ಹಲವಾರು ದೇವಾಲಯಗಳು, ಮಠಗಳು ಜೀಣೋದ್ದಾರ ಕಾರ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ ಎಸ್ ನಿಷ್ಠಿ, ಚಂದ್ರಶೇಖರ ಬಸವರಾಜ ಮೇಲಿಮನಿ, ಸುಧಾಕರ ಗುಡಿ, ಚಿಂತಕ ಲಕ್ಷ್ಮೀಕಾಂತ ದೇವರಗೋನಾಲ, ನಾನಗೌಡ ದೇಸಾಯಿ, ರೇವಪ್ಪ ಎಸ್.ಪಾಟೀಲ ಉಪಸ್ಥಿತರಿದ್ದರು.
ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಮತ್ತು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರದ ನಿರೂಪಣೆಯನ್ನು ಬಸವರಾಜ ಢವಳಗಿ ಇಂಗ್ಲೀಷ್ ಅಧ್ಯಾಪಕರು ನಡೆಸಿಕೊಟ್ಟರು, ಪೂರ್ಣಿಮಾ ಎಸ್. ಗಚ್ಚಿನಮನಿ ಹಿಂದಿ ಉಪನ್ಯಾಸಕರು ಅತಿಥಿಗಳನ್ನು ಪರಿಚಯಿಸಿದರು.