×
Ad

ಯಾದಗಿರಿ | ಪರಸನಳ್ಳಿ ಗ್ರಾಮದೇವತೆ ಜಾತ್ರೆಯಲ್ಲಿ ಪ್ರಾಣಿ ಬಲಿ

Update: 2025-02-19 20:45 IST

ಕೆಂಭಾವಿ: ಪಟ್ಟಣದ ವಾರ್ಡ್ ನಂ‌ 23 ರಲ್ಲಿ ಬರುವ ಪರಸನಳ್ಳಿ ಗ್ರಾಮದಲ್ಲಿ ಕೋಣವನ್ನು ಬಲಿ ಕೊಡಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಪರಸನಳ್ಳಿ ಗ್ರಾಮದ ಗ್ರಾಮದೇವಿ ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ಬುಧವಾರ ನಸುಗಿನ ಜಾವ ಪ್ರಾಣಿ ಬಲಿ ನೀಡಿದ್ದು , ಸದ್ಯ ಈ ಘಟನೆಯು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗಾಸವಾಗಿದೆ.

ದೇವಿ ಜಾತ್ರೆ ಹಿನ್ನೆಲೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಕೈಗೊಂಡಿದ್ದ ಪೋಲಿಸ್ ಅಧಿಕಾರಿಗಳ ಸ‌ಮ್ಮುಖದಲ್ಲೇ ಕೋಣವನ್ನು ಬಲಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News