×
Ad

ಯಾದಗಿರಿ | ಬಸವಣ್ಣನವರು ಕೇವಲ ವಚನಕಾರರಲ್ಲ ಶ್ರೇಷ್ಠ ಆರ್ಥಿಕ ತಜ್ಞರು : ಟಿ.ಎನ್.ಭೀಮುನಾಯಕ

Update: 2025-04-30 18:02 IST

ಯಾದಗಿರಿ : ಕಾಯಕವೇ ಕೈಲಾಸ ಎಂದು ವಿಶ್ವಕ್ಕೆ ಸಾರುವುದರ ಜೊತೆಗೆ ಸಮಾನತೆಗಾಗಿ ಹೋರಾಡಿದ 12 ನೇ ಶತಮಾನದ ಮಹಾನ್ ಕ್ರಾಂತಿ ಪುರುಷ ಬಸವಣ್ಣನವರು ಎಂದು ಕರವೇ ಜಿಲ್ಲಾಧ್ಯಕ್ಷ ಟಿ. ಎನ್.ಭೀಮುನಾಯಕ ಹೇಳಿದರು.

ನಗರದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಾಲಯದಲ್ಲಿ 892ನೇ ಬಸವಣ್ಣ ಜಯಂತಿಯ ನಿಮಿತ್ಯ ಅವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚಣೆ ಮಾಡಿ ಗೌರವ ನಮನ ಸಲ್ಲಿಸಿ ಅವರು ಮಾತನಾಡಿ, ಬಸವಣ್ಣನವರು ಸಮಗ್ರ ಕ್ರಾಂತಿಯ ಯುಗಪುರುಷ. ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದರು. ಬಸವಣ್ಣನವರು ಕೇವಲ ವಚನಕಾರರಲ್ಲದೆ ಶ್ರೇಷ್ಠ ಆರ್ಥಿಕ ತಜ್ಞರು, ವಿಚಾರವಾಧಿ ಹಾಗೂ ಸಮಾನತಾವಾದಿ ಆಗಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಸಾಹೇಬಗೌಡ ನಾಯಕ ಗೌಡಗೇರಾ, ವಿಶ್ವರಾಜ ಪಾಟೀಲ್, ಸಿದ್ದಲಿಂಗರೆಡ್ಡಿ ಮುನಗಲ್, ಕಾಶಿನಾಥ ನಾನೇಕ, ಮರೆಪ್ಪ ಕಡ್ಡಿ, ಹಣಮಂತ ದೊರೆ, ಮಲ್ಲೇಶನಾಯಕ ಕಪ್ಪನೋರ್, ಬಸ್ಸು ಪರಸನಾಯಕ, ನಾಗರಾಜ ಪಿಲ್ಲಿ, ಆನಂದ, ಸಾಬು ನಾಯಕ, ಧವನ್ ನಾಯಕ ಕಪ್ಪನೋರ್, ರಮೇಶ.ಡಿ.ನಾಯಕ, ಹಾಗೂ ಇನ್ನೂ ಅನೇಕ ಕಾರ್ಯಕರ್ತರರು ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News