×
Ad

ಯಾದಗಿರಿ | ಬುಲೆರೋ-ಲಾರಿ ನಡುವೆ ಢಿಕ್ಕಿ : ಇಬ್ಬರು ಮೃತ್ಯು

Update: 2025-03-12 19:35 IST

ಸೈದಾಪುರ : ರಾಯಚೂರು-ಯಾದಗಿರಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಬುಲೆರೋ ಮತ್ತು ಲಾರಿ ಮುಖಾಮುಖಿ ಢಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಸೈದಾಪುರ ಸಮೀಪದ ಕಿಲ್ಲನಕೇರಾ-ನೀಲಹಳ್ಳಿ ಗ್ರಾಮದ ಕ್ರಾಸ್ ಹತ್ತಿರ ನಡೆದಿದೆ.

ಎಸ್‌ಪಿಜೆಸಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 3 ಜನ ಉದ್ಯೋಗಿಗಳು ಬುಧವಾರ ಬೆಳಿಗ್ಗೆ ಸೈದಾಪುರದಿಂದ ಯಾದಗಿರಿ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಯಾದಗಿರಿ ಕಡೆಯಿಂದ ಅತಿ ವೇಗದಲ್ಲಿ ಎದುರಿಗೆ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ, ಬುಲೆರೋ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ಆಂಧ್ರ ಮೂಲದ ಪುರುಷೋತ್ತಮ ವೆಂಕಟದುರ್ಗಾ ಪ್ರಸಾದ (41), ಕುಂಭ ನಾಗರಾಜ (32) ಎಂಬವವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಗಾಯಗೊಂಡ ತೆಲಂಗಾಣ ಮೂಲದ ಕುಸುಮ ರಜಿನಿಕಾಂತ (30) ಎನ್ನುವ ಉದ್ಯೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ಬಾಲಂಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News