×
Ad

ಯಾದಗಿರಿ | ಕ್ರೂಸರ್- ಟಂಟಂ ಆಟೋ ನಡುವೆ ಢಿಕ್ಕಿ : ಇಬ್ಬರು ಸ್ಥಳದಲ್ಲೇ ಮೃತ್ಯು, ಹಲವರಿಗೆ ಗಾಯ

Update: 2025-04-28 22:23 IST

ಸಾಂದರ್ಭಿಕ ಚಿತ್ರ

ಸುರಪುರ : ಕ್ರೂಸರ್ ಹಾಗೂ ಟಂಟಂ ಆಟೋ ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಮೃತರನ್ನು ಬುಡ್ಡಪ್ಪ ತಳವಾರ ಹಾಗೂ ದೇವಪ್ಪ ಚಿಂಚೋಡಿ ಎಂದು ಗುರುತಿಸಲಾಗಿದೆ.

ಸುರಪುರದಿಂದ ದೇವಪುರ ಗ್ರಾಮಕ್ಕೆ ಹೊರಟಿದ್ದ ಟಂಟಂ ಆಟೋ ಹಾಗೂ ಲಿಂಗಸುಗೂರಿನಿಂದ ಜೇವರ್ಗಿ ಕಡೆಗೆ ಹೊರಟಿದ್ದ ಕ್ರೂಸರ್ ವಾಹನಗಳ ಮಧ್ಯೆ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ರಾಚಯ್ಯ ಸ್ವಾಮಿ ಸೇರಿ ಐದಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಕಲಬುರಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸುರಪುರ ಠಾಣೆ ಪಿ.ಐ ಉಮೇಶ್ ನಾಯಕ್ ತಿಳಿಸಿದ್ದಾರೆ.

ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News