×
Ad

ಯಾದಗಿರಿ | ಅವಧಿ ಮೀರಿದ ಎಲ್‌ಎಬಿ ಬಿಯರ್ ದಾಸ್ತಾನನ್ನು ನಾಶ : ವ್ಯವಸ್ಥಾಪಕ ಎಚ್.ಎಸ್.ಪಾಟೀಲ್

Update: 2025-03-05 18:29 IST

ಯಾದಗಿರಿ : ಜಿಲ್ಲೆಯ ಕೆ.ಎಸ್.ಬಿ.ಸಿ ಎಲ್ ಮದ್ಯಮಳಿಗೆ ಯಾದಗಿರಿಯಲ್ಲಿ ಅವಧಿ ಮೀರಿದ ಎಲ್.ಎ.ಬಿ, ಬಿಯರ್ ದಾಸ್ತಾನನ್ನು ನಾಶಪಡಿಸಲಾಯಿತು ಎಂದು ಯಾದಗಿರಿ ಮಳಿಗೆ ವ್ಯವಸ್ಥಾಪಕರು ಹೆಚ್.ಎಸ್.ಪಾಟೀಲ್ ಅವರು ತಿಳಿಸಿದ್ದಾರೆ.

ಯಾದಗಿರಿ ನಗರದ 2025ರ ಮಾ.5ರ ಬುಧವಾರ ರಂದು ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ, ಮದ್ಯಮಳಿಗೆ ಯಾದಗಿರಿಯಲ್ಲಿ ಅವಧಿ ಮುಗಿದ ಅಂದಾಜು 10,96,146 ರೂ. ಗಳ ಮೊತ್ತದ ದಾಸ್ತಾನನ್ನು ನಾಶಪಡಿಸಲಾಯಿತು.

ನಾಶಪಡಿಸಿದ ಮದ್ಯದ ದಾಸ್ತಾನಿನ ವಿವರ ಲಂಡನ್ ಪಿಲ್ಸನರ್ ಪ್ರೀಮಿಯಮ್ ಸ್ರ್ಟಾಂಗ್ ಬಿಯರ್ ಎಮ್.ಎಲ್.ಬಾಟಲ್ಸ್ ಪೆಟ್ಟಿಗೆಗಳು 204 ಇದ್ದು, ಬಿಡಿ ಬಾಟಲ್‌ಗಳು 1 ಇದೆ. ಹಂಟರ್ ರಿಪ್ರೇಶ್‌ಯಿಂಗ್ ಸ್ಟ್ರಾಂಗ್‌ ಬಿಯರ್ 650 ಎಮ್.ಎಲ್, ಪೆಟ್ಟಿಗೆಗಳು 9 ಇದ್ದು, ಬಿಡಿ ಬಾಟಲ್‌ಗಳು ಇಲ್ಲ. ಫೋಸ್ಟರ್ ಗೋಲ್ಡ್ ಸ್ರ್ಟಾಂಗ್ ಬಿಯರ್ 650 ಎಮ್.ಎಲ್, ಬಾಟಲ್ಸ್ ಪೆಟ್ಟಿಗೆಗಳು 160 ಇದ್ದು, ಬಿಡಿ ಬಾಟಲ್‌ಗಳು 11 ಇದೆ. ರಾಯಲ್ ಚಾಲೆಂಜ್ ಸ್ರ್ಟಾಂಗ್ ಪ್ರೀಮಿಯಮ್ ಬಿಯರ್ 330 ಎಮ್.ಎಲ್ ಪೆಟ್ಟಿಗೆಗಳು 146 ಇದ್ದು, ಬಿಡಿ ಬಾಟಲ್‌ಗಳು 19 ಇದೆ. ಬುಲೆಟ್ ಸೂಪರ್ ಸ್ರ್ಟಾಂಗ್ ಬಿಯರ್ 500 ಎಮ್.ಎಲ್. ಕ್ಯಾನ್ಸ್ ಪೆಟ್ಟಿಗೆಗಳು 72 ಇದ್ದು, ಬಿಡಿ ಬಾಟಲ್‌ಗಳು ಇಲ್ಲ.

ಟುಬರ್ಗ ಗ್ರೀನ್ ಬಿಯರ್ 500 ಎಮ್.ಎಲ್ ಕ್ಯಾನ್ಸ್ ಪೆಟ್ಟಿಗೆಗಳು 3 ಇದ್ದು, ಬಿಡಿ ಬಾಟಲ್‌ಗಳು ಇಲ್ಲ. ಟುಬರ್ಗ ಸ್ರ್ಟಾಂಗ್ ಪ್ರೀಮಿಯಮ್ ಬಿಯರ್ 500 ಎಮ್.ಎಲ್ ಕ್ಯಾನ್ಸ್ ಪೆಟ್ಟಿಗೆಗಳು 5 ಇದ್ದು, ಬಿಡಿ ಬಾಟಲ್‌ಗಳು ಇಲ್ಲ. ಬ್ರೀಜರ್ ಎಕ್ಸೋಟಿಕ್ ಜಮಾಕೈನ್ ಪ್ಯಾಶನ್ 275 ಎಮ್.ಎಲ್ ಬಾಟಲ್ಸ್ ಪೆಟ್ಟಿಗೆಗಳು 7 ಇದ್ದು, ಬಿಡಿ ಬಾಟಲ್‌ಗಳು ಇಲ್ಲ. ಪೆಟ್ಟಿಗೆಗಳು 606 ಇದೆ. ಬಿಟಿ ಬಾಟಲ್‌ಗಳು 31 ಇದೆ. ಈ ದಾಸ್ತಾನನ್ನು ಶಹಾಪೂರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರು ಶ್ರೀ ಹರ್ಷರಾಜ್ ಬಿ. ಅವರ ಸಮಕ್ಷಮ ನಿರುಪಯುಕ್ತ ಸ್ಥಳದಲ್ಲಿ ಪರಿಸರಕ್ಕೆ ಯಾವುದೇ ತರಹ ಹಾನಿ ಆಗದೇ ರೀತಿ ಕ್ರಮಕೈಗೊಂಡು ನಾಶಪಡಿಸಲಾಗಿದೆ.

ಈ ಸಂದರ್ಭದಲ್ಲಿ ಯಾದಗಿರಿ ಉಪ ತಹಸೀಲ್ದಾರರು ವೆಂಕಟೇಶ, ಯಾದಗಿರಿ ತಾಲ್ಲೂಕು ಮದ್ಯಮಳಿಗೆ ಅಬಕಾರಿ ನಿರೀಕ್ಷಕರು ಶ್ರೀಮತಿ ರಮಾ, ಯಾದಗಿರಿ ಅಬಕಾರಿ ಪೇದೆ ಮಾರುತಿ ಪವಾರ ಮದ್ಯದ ದಾಸ್ತಾನಿನ ಕಂಪನಿಯ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News