ಯಾದಗಿರಿ | ಜಯ ಕರ್ನಾಟಕ ಸಂಘಟನೆಯಿಂದ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ
ಯಾದಗಿರಿ : ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಬಿ.ಎನ್.ಜಗದೀಶ್ ಅವರ ಹುಟ್ಟುಹಬ್ಬದ ಅಂಗವಾಗಿ ನಗರದ ಜಿಲ್ಲಾಸ್ಪತ್ರೆ ರೋಗಿಗಳಿಗೆ ಹಣ್ಣು ಬ್ರೇಡ್ ವಿತರಣೆ ಮಾಡಲಾಯಿತು.
ಜಯ ಕರ್ನಾಟಕ ಸಂಘಟನೆಯ ಜಿಲ್ಲಾದ್ಯಕ್ಷ ಬಿಎನ್.ವಿಶ್ವನಾಥ್ ನಾಯಕ ನೇತೃತ್ವದಲ್ಲಿ ಆಸ್ಪತ್ರೆಗೆ ತೆರಳಿದ ಮುಖಂಡರು ಹಾಗೂ ಕಾರ್ಯಕರ್ತರು ಹಣ್ಣು ಬ್ರೆಡ್ ವಿತರಣೆ ಮಾಡಿದರು.
ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ಹಣ್ಣುಗಳು ವಿತರಣೆ ಮಾಡಿ ಮಾತನಾಡಿದ ವಿಶ್ವನಾಥ್ ನಾಯಕ, ರಾಜ್ಯಾಧ್ಯಕ್ಷರ ಹುಟ್ಟುಹಬ್ಬದ ಅಂಗವಾಗಿ ಅದ್ದೂರಿ ಕಾರ್ಯಕ್ರಮಗಳ ಬದಲಿಗೆ ಗರ್ಭಿಣಿ ಮಹಿಳೆಯರಿಗೆ ಹಣ್ಣು ಬ್ರೆಡ್ ವಿತರಣೆ ಮಾಡಲಾಯತು. ಸರಳ ಸಜ್ಜನಿಕೆ ಹಾಗೂ ಅನ್ಯಾಯದ ವಿರುದ್ಧ ದನಿ ಎತ್ತುವ ನಾಯಕರಿಗೆ ಶುಭ ಕೋರಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ, ಶಿವರಾಜ ಗುತ್ತೇದಾರ, ಭೀಮು ಪೂಜಾರಿ, ನಾಗರಾಜ ಸಾಹುಕಾರ, ಸದ್ದಾಂ, ಅಮೀರ್ ಖುರೇಷಿ, ರಂಗನಾಥ ನಾಯಕ, ಅಶೋಕರೆಡ್ಡಿ ಯಲ್ಹೇರಿ, ಶರಣು ಹೊನಿಗೇರಾ, ವಿಶ್ವಾರಾದ್ಯ ಹುಲಕಲ್, ಮರಲಿಂಗ ನಕ್ಕಲ್, ಯಾಸೀನ್, ರೈಮಾನ್ ಖುರೇಷಿ ಇನ್ನಿತರರು ಇದ್ದರು.