×
Ad

ಯಾದಗಿರಿ | ವಾಲ್ಮೀಕಿ ನಾಯಕ ಸಮಾಜದ ತಾಲೂಕು ನಗರ ಪದಾಧಿಕಾರಿಗಳ ಆಯ್ಕೆ

Update: 2025-03-01 19:17 IST

ಯಾದಗಿರಿ : ವಾಲ್ಮೀಕಿ ನಾಯಕ ಸಮಾಜದ ಏಳಿಗೆಗಾಗಿ ಪ್ರತಿಯೊಬ್ಬರ ಸಹಕಾರ ಸಲಹೆ ಬಹಳ ಮುಖ್ಯ. ಅಂದಾಗ ಮಾತ್ರ ಸಮಾಜದ ಸೇವೆ ಮಾಡಲು ಸಾಧ್ಯ ಎಂದು ಯಾದಗಿರಿ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಸಾಹೇಬಗೌಡ ನಾಯಕ ಗೌಡಗೇರ ಹೇಳಿದರು.

ಇಂದು ನಗರದ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ ಯಾದಗಿರಿ ತಾಲೂಕು ಹಾಗೂ ನಗರ ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ವಾಲ್ಮೀಕಿ ನಾಯಕ ಸಮಾಜದ ಸದೃಢವಾಗಿ ಬೆಳೆಯಲು ಪದಾಧಿಕಾರಿಗಳ ಪಾತ್ರ ಬಹಳ ಮುಖ್ಯವಿದೆ.  ಆದ್ದರಿಂದ ನಾನು ತಾಲೂಕು ಘಟಕದ ಅಧ್ಯಕ್ಷ ಆದ ತಕ್ಷಣವೇ ಪದಾಧಿಕಾರಿಗಳ ಆಯ್ಕೆ ಮಾಡಿ ಅವರಿಗೆ ಜವಾಬ್ದಾರಿ ನೀಡಿದ್ದೇನೆ. ಆ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಮಾರೆಪ್ಪ ನಾಯಕ ಮಾತನಾಡಿದರು.

ನೂತನ ತಾಲೂಕು ಪದಾಧಿಕಾರಿಗಳು :

ಉಪಾಧ್ಯಕ್ಷರಾಗಿ ಭೀಮರಾಯ ರಾಮಸಮುದ್ರ, ಸಿದ್ದಪ್ಪ ಕೂಯಿಲೂರ, ಕಾಶಪ್ಪ ದೊರೆ, ಬಸವರಾಜ ಸೈದಪೂರ.

ಸಹ ಕಾರ್ಯದರ್ಶಿಯಾಗಿ ಲಕ್ಷ್ಮಣ ಜೀನಿಕೇರಿ, ದೊಡ್ಡಪ್ಪ ನಾಯಕ ಹಳಿಗೇರ, ಸಾಬು ನಿಲಹಳ್ಳಿ, ರವಿ, ಅಂಬಣ್ಣ ಗೌಡಗೇರ, ಭೀಮರಾಯ ಓಡ್ಕರ್.

ಸಂಘಟನೆ ಕಾರ್ಯದರ್ಶಿಗಳಾಗಿ ಮಂಜುನಾಥ ಬಳಿಚಕ್ರ, ಬಸವರಾಜ ಹತ್ತಿಕುಣಿ, ಹಣಮಂತ್ರಾಯ ಮುಷ್ಟೂರ, ನಾಗಪ್ಪ ಠಾಣಗುಂದಿ.

ಖಜಾಂಚಿಯಾಗಿ ಸಿದ್ದಪ್ಪ ಕ್ಯಾಸಪನಳ್ಳಿ, ಸಹ ಖಜಾಂಚಿಯಾಗಿ ದೇವು ಹತ್ತಿಕುಣಿ, ಕಾನೂನು ಸಲಹೆಗಾರರಾಗಿ ಭೀಮಾಶಂಕರ ಮುಂಡರಗಿ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ನಗರ ಘಟಕದ ಪದಾಧಿಕಾರಿಗಳು :

ಉಪಾಧ್ಯಕ್ಷರಾಗಿ ಮೋನಪ್ಪ ಯಾದಗಿರಿ, ಮಲ್ಲಿಕಾರ್ಜುನ, ಶರಣು ದೊರೆ, ಖಜಾಂಚಿಯಾಗಿ ಗುರುರಾಜ ಬಗ್ಲಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಚಂದ್ರಕಾಂತ ಕವಲ್ದಾರ, ಸಿದ್ಧಲಿಂಗಪ್ಪ ನಿವೃತ್ತ ತಹಸಿಲ್ದಾರ್, ಶರಣಪ್ಪ ಜಾಕ್ನಳ್ಳಿ, ಸಾಬಣ್ಣ ಬಗ್ಲಿ, ಬಸವರಾಜ್ ಕವಲ್ದಾರ ಹತ್ತಿಕುಣಿ, ಮಲ್ಲಿಕಾರ್ಜುನ್ ನೀಲಹಳ್ಳಿ, ಬಸವರಾಜ ಗೊಂದೆನೂರ್, ರೋಹಿತ್ ಹುಲಿನಾಯಕ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News