ಯಾದಗಿರಿ | ವ್ಯವಹಾರಕ್ಕೆ ನೂರು ಭಾಷೆಯಾದರೂ ಮಾತೃಭಾಷೆಯೇ ಹೃದಯ ಸ್ಪರ್ಷಿ : ವಿಶ್ವನಾಥ ನಾಯಕ
ಯಾದಗಿರಿ: ವ್ಯವಹಾರಕ್ಕೆ ನೂರು ಭಾಷೆಯಾದರೂ ಹೃದಯಕ್ಕೆ ಮಾತೃಭಾಷೆಯೇ ಸ್ಪರ್ಷಿಸುತ್ತದೆ ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎನ್.ವಿಶ್ವನಾಥ ನಾಯಕ ಹೇಳಿದರು.
ನಗರದ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಕಚೇರಿಯಲ್ಲಿ ಅಂತರರಾಷ್ಟ್ರೀಯ ಮಾತೃಭಾಷೆ ದಿನದ ಅಂಗವಾಗಿ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಮಾತೃ ಭಾಷೆ ಮಾತ್ರ ಮನಸ್ಸು ಹೃದಯ ಮುಟ್ಟಲು ಸಾದ್ಯ ಎಂಬುದನ್ನು ಅರಿಯಬೇಕು. ಇದೇ ಕಾರಣಕ್ಕೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂದು ಬಹುತೇಕ ಎಲ್ಲ ತಜ್ಞರು ಅಭಿಯಪ್ರಾಯಪಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಮಗದಮಪುರ್, ಶಿವರಾಜ್ ಗುತ್ತೇದಾರ್, ಭೀಮು ಪೂಜಾರಿ, ಅಶೋಕ್ ರೆಡ್ಡಿ ಯಲ್ಲೇರಿ, ಶರಣು ವನಿಗೆರ, ನವಾಜ್ ಖಾದ್ರಿ, ಮಮ್ಮದ್ ಸದ್ದಾಂ, ವೆಂಕಟೇಶ ಬಿದರಾಣಿ, ಮಹೇಶ್ ಇಬ್ರಾಹಿಂಪುರ್, ಅಮೀರ್ ಚೌದ್ರಿ, ಗೌಸ್ ಚೌಧರಿ, ರೈಮಾನ್ ಚೌಧರಿ, ರೈಮಾನ್ ಹೊಟೆಲ್, ಯಾಸಿನ್ ಚೌಧರಿ ಸೇರಿದಂತೆ ಇನ್ನಿತರರು ಇದ್ದರು.