×
Ad

ಯಾದಗಿರಿ | ಮಾತೃಭಾಷೆ ಪ್ರೇಮ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು : ಅಬ್ಬೆತುಮಕೂರು ಶ್ರೀ

Update: 2024-11-30 21:01 IST

ಯಾದಗಿರಿ : ಮಾತೃಭಾಷೆ ಪ್ರೇಮ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಕನ್ನಡ ತಾಯಿ ಸೇವೆ ಮಾಡುವ ಕೆಲಸ ಪ್ರತಿಯೊಬ್ಬರು ಮಾಡಬೇಕೆಂಬ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಅಬ್ಬೆತುಮಕೂರು ಸಿದ್ದಸಂಸ್ಥಾನ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದ್ದಾರೆ.

ನಗರದ ಗಾಂಧಿ ವೃತ್ತದಲ್ಲಿರುವ ಪಂಪ ಮಹಾಕವಿ ಮಂಟಪದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ʼಗಿರಿನಾಡ ಉತ್ಸವ-2024 ಭವ್ಯ ಸಮಾರಂಭʼದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಎಷ್ಟೇ ಅನ್ಯ ಭಾಷೆಗಳ ಪಾಂಡಿತ್ಯ ಹೊಂದಿದ್ದರೂ ಮಾತೃಭಾಷೆಯೇ ಹೃದಯದ ಭಾಷೆಯಾಗಿರುತ್ತದೆ. ಅಂತಹ ಮಾತೃಭಾಷೆಯ ರಕ್ಷಣೆ ಅದರ ಸಂಸ್ಕೃತಿ, ನೆಲ ಜಲ ಸಂರಕ್ಷಣೆ ಪ್ರತಿಯೊಬ್ಬ ಮಾತೃಭಾಷಾ ಮಾತೆಯ ಮಕ್ಕಳ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆ ನೆಲ ಜಲ ರಕ್ಷಣೆ ವಿಷಯದಲ್ಲಿ ಸಮರ್ಪಕವಾಗಿ ಕೆಲಸವನ್ನು ಭೀಮುನಾಯಕ ನೇತೃತ್ವದ ಯುವಕರ ಪಡೆ ಅತ್ಯುತ್ತಮವಾಗಿ ಮಾಡುತ್ತಿದೆ ಎಂದು ಶ್ಲಾಘಿಸಿದ ಶ್ರೀಗಳು ಇನ್ನಷ್ಟು ಉತ್ತಮ ಕಾರ್ಯ ಮಾಡಿ ಆದರೆ ನಿಮ್ಮ ಕಾರ್ಯ ಮೆಚ್ಚುವಂತಿರಲಿ ಬೆಚ್ಚುವಂತಿರದಿರಲಿ ಎಂದು ಕಿವಿಮಾತು ಹೇಳಿದರು.

ಮಾಜಿ ಸಚಿವ ನರಸಿಂಹ ನಾಯಕ ರಾಜೂಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡು ನುಡಿಗಾಗಿ ಭೀಮುನಾಯಕ ದಣಿವರಿಯದೇ ಯುವಕರ ಪಡೆಯನ್ನೇ ಕಟ್ಟಿಕೊಂಡು ಹೋರಾಟ ಮಾಡುತ್ತಿದ್ದಾರೆ. ರೈಲು ನಿಲುಗಡೆಗಾಗಿ ನನ್ನ ಮೇಲೆ ಒತ್ತಡ ಹೇರಿ ವಂದೇ ಭಾರತ ರೈಲು ನಿಲ್ಲಿಸಲು ಇನ್ನಿಲ್ಲದ ಒತ್ತಡ ಹಾಕಿ ಕೆಲಸ ಮಾಡಿಸಿಕೊಂಡಿದ್ದಾರೆ ಎಂದು ಸ್ಮರಿಸಿದ್ದರು.

ಯಾದಗಿರಿ ಮತಕ್ಷೇತ್ರದ ಶಾಸಕ ಚೆನ್ನರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಯಾದಗಿರಿ ನಗರಕ್ಕೆ ಶುದ್ಧ ಕುಡಿಯುವ ನೀರಿನ ಬಗ್ಗೆ ಗಮನದಲ್ಲಿದೆ. ಪಕ್ಕದ ಕಲ್ಬುರ್ಗಿಯಲ್ಲಿ ನೀರಿಗಾಗಿ ಭಾರಿ ಸಮಸ್ಯೆ ಇದೆ ಆದಾಗ್ಯೂ ಈಗಾಗಲೇ ಕಾಮಗಾರಿಯ ಟೆಂಡರ್ ಆಗಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ನಿತ್ಯ ನೀರು ಒದಗಿಸುವ ಕೆಲಸ ಮಾಡಲಾಗುವುದು. ಭೀಮುನಾಯಕರ ಬೇಡಿಕೆಗಳಾದ ಕೌಶಲ್ಯಾ ವಿವಿಗಾಗಿ ಪ್ರಯತ್ನಿಸುತ್ತೇನೆ ಅದು ಸಚಿವರಿರುವ ಕಾರಣಕ್ಕೆ ಅದು ಶಹಾಪುರಕ್ಕೆ ಹೋಗೊದಿಲ್ಲ ಅದು ಯಾದಗಿರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಅಧ್ಯಕ್ಷ ಟಿ.ಎನ್.ಭೀಮು ನಾಯಕ, ಅಲೆಮಾರಿ ನಿಗಮ ಮಾಜಿ ರಾಜ್ಯಾಧ್ಯಕ್ಷ ದೇವೇಂದ್ರನಾಥ ನಾದ, ಕರವೇ ರಾಜ್ಯ ಸಂಚಾಲಕ ಸಂತೋಷ ಪಾಟೀಲ್ ಡಂಬಳ, ಯುಡಾ ಅದ್ಯಕ್ಷ ವಿನಾಯಕ ಮಾಲಿ ಪಾಟೀಲ್, ಎಚ್.ಸಿ. ಪಾಟೀಲ್, ಚಂದ್ರಶೇಖರ ಡಿ.ಎಸ್. ಮ್ಯಾಕ್ಸ್ ಹುಣಸಗಿ, ಜಿಪಂ ಮಾಜಿ ಸದಸ್ಯ ಮರಲಿಂಗಪ್ಪ ಕರ್ನಾಳ್, ಚೆನ್ನಾರಡ್ಡಿ ಬಿಳ್ಹಾರ, ವಕ್ಫ್ ಮಂಡಳಿ ಜಿಲ್ಲಾಧ್ಯಕ್ಷ ಜಹೀರುದ್ದಿನ್ ಸವೇರಾ, ವಿಶ್ವನಾಥ ಗೊಂದಡಗಿ, ಚಂದ್ರಗೌಡ ಸೈದಾಪೂರ, ನರೇಂದ್ರ ರಾಠೋಡ, ಮಹಾರಾಜ ದಿಗ್ಗಿ, ಮಹೇಶ ಅವಂಟಿ, ವಿಜಯ ಕಡೇಚೂರು, ನಗರಸಭೆ ಸದಸ್ಯ ಹಣಮಂತನಾಯಕ, ದೇವೇಗೌಡ ರಾಮನಾಳ, ಮಲ್ಲು ಮಾಳಿಕೇರಿ, ಅಂಬ್ರೇಷ್ ಹತ್ತಿಮನಿ, ಸಂತೋಷ ನಿರ್ಮಲಕರ್, ಚೌಡಯ್ಯ ಬಾವೂರ, ಸಾಹೇಬಗೌಡ ನಾಯಕ, ವಿಶ್ವರಾಜ ಹೊನಿಗೇರಾ, ಅರ್ಜುನ ಪವಾರ್, ಹಣಮಂತ ನಾಯಕ ಖಾನಳ್ಳಿ, ಶರಣಪ್ಪ ದಳಪತಿ, ಹಣಮಂತ ಅಚ್ಚೊಲಾ, ಶರಣು ಸಾಹುಕಾರ್, ವೆಂಕಟೇಶ ಬೈರಿಮಡ್ಡಿ ಸುರಪುರ, ಶರಣಬಸಪ್ಪ ಎಲ್ಹೇರಿ ಗುರುಮಠಕಲ್, ಅಬ್ದುಲ್ ಚಿಗಾನೂರು ವಡಗೇರಿ, ಬಸವರಾಜ ಚೆನ್ನೂರ ಹುಣಸಗಿ, ಅಬ್ದುಲ್ ಹಾದಿಮನಿ ಶಹಾಪೂರ ತಾ. ಅದ್ಯಕ್ಷರುಗಳು ಸೇರಿದಂತೆ ನೂರಾರು ಕರವೇ ಸೇನಾನಿಗಳು ಪಾಲ್ಗೊಂಡರು.

ಇದೇ ಸಂದರ್ಭದಲ್ಲಿ ಅಂತರ್‌ರಾಷ್ಟ್ರೀಯ ಖ್ಯಾತ ಹಾಸ್ಯ ಕಲಾವಿದ ಬಸವರಾಜ ಮಹಾಮನಿ (ಸಾಹಿತ್ಯ ಕ್ಷೇತ್ರ), ವೈಜನಾಥ ಹಿರೇಮಠ (ಪತ್ರಿಕಾ ರಂಗ), ಬನ್ನಪ್ಪ ಭಂಗಿ (ವೈದ್ಯಕೀಯ ಕ್ಷೇತ್ರ) ಮತ್ತು ಅರುಣ ಶಹಾಪೂರ (ಯೋಗ ಕ್ರೀಡೆ) ಕ್ಷೇತ್ರದ ಸಾಧನೆಗಾಗಿ ಗಿರಿನಾಡ ಸೇವಾ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು.

ನಂತರ ಝಿಕನ್ನಡ ಕಾಮಿಡಿ ಕಿಲಾಡಿಗಳಾದ ಖಾಸಿಮ್, ನಯನ, ಮಹನ್ಯ, ಕವಿತಾ, ರಾಕೇಶ, ಪ್ರವೀಣ್, ದಿಪಿಕಾ ಅವರಿಂದ ಜರುಗಿದ ಕನ್ನಡ ಸಂಗೀತ ಹಾಗೂ ಹಾಸ್ಯ ನೆರೆದಿದ್ದ ಅಪಾರ ಸಂಖ್ಯೆಯ ಕನ್ನಡಿಗರ ಮನಸೂರೆಗೊಂಡವು. ಮೊದಲಿಗೆ ಸಿದ್ದು ನಾಯಕ ಹತ್ತಿಕುಣಿ ಸ್ವಾಗತಿಸಿದರು. ಮಾತಿನಮಲ್ಲ ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News