×
Ad

ಯಾದಗಿರಿ | ಗಡಿ ಗ್ರಾಮ ಅಭಿವೃದ್ಧಿಗೆ ಅನುದಾನ ಮಂಜೂರು

Update: 2025-02-22 20:21 IST

ಯಾದಗಿರಿ : ನಸಲವಾಯಿ ಗ್ರಾಮಸ್ಥರಿಂದ ಚರಂಡಿ ಅವ್ಯವಸ್ಥೆ ಕುರಿತು ದೂರುಗಳು ಬಂದ ಕಾರಣ ಸ್ವತಃ ಸಿಇಓ ಅವರು ನಸಲವಾಯಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಗುರುಮಠಕಲ್ ತಾಲೂಕಿನ ಅನಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ನಸಾಲವಾಯಿ ಗ್ರಾಮಕ್ಕೆ ಈಚೆಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿ.ಪಂ ಯೋಜನಾ ನಿರ್ದೇಶಕರು ಹಾಗೂ ಇಓ ಸೇರಿದಂತೆ ಅಧಿಕಾರಿಗಳ ತಂಡ ಅನಪುರ ಮತ್ತು ನಸಲವಾಯಿ ಗ್ರಾಮಕ್ಕೆ ಆಗಮಿಸಿ, ಗ್ರಾಮದ ತುಂಬ ಸಂಚರಿಸಿ ಚರಂಡಿಗಳ ಅವ್ಯವಸ್ಥೆ ಸರಿಪಡಿಸಲು ಮತ್ತು ಚರಂಡಿಗಳ ನಿರ್ಮಾಣಕ್ಕೆ 18 ಲಕ್ಷ ರೂ. ಮೊತ್ತದ ಅನುದಾನ ಮೀಸಲಿಟ್ಟಿದ್ದು, ಕ್ರಮಕ್ಕೆ ಸೂಚಿಸಿದರು.

ಸದರಿ ಕ್ರಿಯಾಯೋಜನೆ ಅನುಮೋದನೆಯಾಗಿದ್ದು, ಮಾರ್ಚ್ ಅಂತ್ಯದ ವೇಳೆಗೆ ಪ್ರಗತಿ ಸಾಧಿಸಲಿದೆ ಎಂದು ಗ್ರಾಪಂ ಪಿಡಿಓ ಮತ್ತು ಇಓ ಅವರು ತಿಳಿಸಿದ್ದಾರೆ.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸ್ಪಂದನೆಯಿಂದ ಗ್ರಾಮ ಪಂಚಾಯತ್‌ ಅಭಿವೃದ್ಧಿ ಸಹಕಾರಿಯಾಗಿದ್ದು, ಅನಪುರ ಗ್ರಾಮ ಪಂಚಾಯತ್‌ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಧನ್ಯವಾದಗಳು ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News