ಯಾದಗಿರಿ | ವಿಷಗಾಳಿ ಹೊರತರುವ ಕಾರ್ಖಾನೆಗಳನ್ನು ಮುಚ್ಚಿಸಲು ಜೆಡಿಎಸ್ ಮುಖಂಡರಿಂದ ಡಿಸಿಗೆ ಮನವಿ
ಯಾದಗಿರಿ : ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ವಿಷಪೂರಿತ ಗಾಳಿಯನ್ನು ಸೂಸುತ್ತಿರುವ ಕಾರ್ಖಾನೆಗಳನ್ನು ಮುಚ್ಚಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಜೆಡಿಎಸ್ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಕೆಲವು ಕಾರ್ಖಾನೆಗಳು ವಿಷಪೂರಿತ ಗಾಳಿಯನ್ನು ಸೂಸುತ್ತಿವೆ. ಇದರಿಂದ ಜನಸಾಮಾನ್ಯರಿಗೆ ಉಸಿರಾಟದ ತೊಂದರೆಯಾಗಿ ಆರೋಗ್ಯ ಕೆಡುತ್ತಿದೆ ಎಂದು ಸಾರ್ವಜನಿಕರು ಹಾಗೂ ಜಿ.ಟಿ. & ಟಿ.ಸಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ನಮ್ಮ ಶಾಸಕರಾದ ಶರಣಗೌಡ ಕಂದಕೂರರವರಿಗೆ ದೂರು ನೀಡಿದ್ದು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಮ್ಮ ಶಾಸಕರಾದ ಶರಣಗೌಡ ಕಂದಕೂರ ರವರು ಸದನದ ಒಳಗೆ ಮತ್ತು ಹೊರಗೆ ವಿಷಪೂರಿತ ಗಾಳಿ ಸೂಸುವ ಕಾರ್ಖಾನೆ ಮುಚ್ಚುವ ಬಗ್ಗೆ ಸರ್ಕಾರಕ್ಕೆ ತಿಳಿಸಿದರೂ, ಯಾವುದೇ ಪ್ರಯೋಜನೆವಾಗಿಲ್ಲ. ತಾವುಗಳು ಮುತುವರ್ಜಿವಹಿಸಿ ಜನರ ಆರೋಗ್ಯ ಮತ್ತು ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ಈ ಕೂಡಲೇ ವಿಷಪೂರಿತ ಗಾಳಿಯನ್ನು ಸೂಸುತ್ತಿರುವ ಕಾರ್ಖಾನೆಗಳನ್ನು ಗುರುತಿಸಿ, ಅವುಗಳ ಉತ್ಪಾದನೆಗಳನ್ನು ತಡೆಹಿಡಿದು, ಹಾಗೂ ಅವುಗಳ ಪರವಾನಿಗೆ ರದ್ದುಗೊಳಿಸಿ ಜನಸಾಮಾನ್ಯರ ಆರೋಗ್ಯಕ್ಕೆ ಹಿತವಾಗುವಂತೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ತಪ್ಪಿದ್ದಲ್ಲಿ ಜಿಲ್ಲಾ ಜೆಡಿಎಸ್. ಪಕ್ಷದ ವತಿಯಿಂದ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯ ಮೇಲೆ ಚಳುವಳಿ ಹಮ್ಮಿಕೊಂಡು, ರಸ್ತೆ ತಡೆಗಟ್ಟಲಾಗುವುದು ಹಾಗೂ ವಿಷಪೂರಿತ ಗಾಳಿ ಸೂಸುತ್ತಿರುವ ಕಾರ್ಖಾನೆಗಳಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಭೋಜನಗೌಡ ಯಡ್ಡಳ್ಳಿ, ಚನ್ನಪ್ಪಗೌಡ ಮೋಸಂಬಿ, ವಿಶ್ವನಾಥ ಶಿರವಾರ, ಬಸವರಾಜಪ್ಪಗೌಡ ಗೊಂದಡಗಿ, ಜಿ.ತಮ್ಮಣ್ಣ, ಬಂದಪ್ಪ ಅರಳಿ, ಚಂದ್ರು ಗೌಡ ಸೈದಾಪೂರ, ಮಲ್ಲಿಕಾರ್ಜುನ ಅರುಣಿ, ಈಶ್ವರ ನಾಯಕ, ನರಸಪ್ಪ ಕವಡೆ, ತಾಯಪ್ಪ ಬದ್ದೇಪಲ್ಲಿ, ಸಿದ್ದಲಿಂಗರಡ್ಡಿಗೌಡ, ಬಸಣ್ಣ ದೇವರಹಳ್ಳಿ ಬಸರಡ್ಡಿ ಹೆಗ್ಗಣಗೇರಾ, ರವಿ ಪೊಲೀಸ್ ಪಾಟೀಲ್, ಶಮಿ ಸಾಹುಕಾರ ಕಡೆಚೂರ್,ಗುರುನಾಥರಡ್ಡಿ ಸೈದಾಪುರ್, ಸಿದ್ದಲಿಂಗರಡ್ಡಿ ಮುನಗಲ್ಶಂ ಕರಲಿಂಗ ಕಡೆಚೂರ್, ಸಿದ್ದಲಿಂಗರಡ್ಡಿ ಅರಕೆರಾ ಬಿ ಈಶ್ವರ ನಾಯಕ, ಮಹಿಪಾಲರಡ್ಡಿ ಮಲ್ಹಾರ್ಮ ಲ್ಲಿಕಾರ್ಜುನ ಆರುಣಿ, ಬಾಪುಗೌಡ ರಾಮಸಮುದ್ರ ರಾಜು ಉಡುಪಿ, ಸೋಮ್ಮಣ್ಣಗೌಡ ಬೆಳಗೇರಾ, ಯಾಂಕೋಬಾ ಕಾಂಚಗಾರಹಳ್ಳಿ, ಶರಣಪ್ಪಗೌಡ ಹೊಸಳ್ಳಿ ಶ್ರೀಧರ ಶೆಟ್ಟಹಳ್ಳಿ, ದೇವು ಘಂಟಿ ಬಾಡಿಯಾಳ ಲಕ್ಷಣ ನಾಯಕ ಕೂಡ್ಲುರ್, ಸೇರಿದಂತೆ ಇತರರಿದ್ದರು.