ಯಾದಗಿರಿ | ಆತ್ಮಹತ್ಯೆ ಮಾಡಿದ ರೈತ ನಿಂಗಾರೆಡ್ಡಿ ಕುಟುಂಬಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಠ್ಠಲ್‌ರಿಂದ ಸಾಂತ್ವಾನ
Update: 2025-07-28 21:31 IST
ಸುರಪುರ: ಜು.17 ರಂದು ತನ್ನ ಜಮೀನಿನಲ್ಲಿ ಸಾಲಭಾದೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದ ರೈತ ನಿಂಗಾರಡ್ಡಿ ಕೋಳಿಹಾಳ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಯಾದವ್ ಭೇಟಿ ನೀಡಿ, ಸಾಂತ್ವಾನ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನಿಂಗಾರೆಡ್ಡಿಯ ಸಾವು ತುಂಬಾ ನೋವು ತಂದಿದೆ. ಆತ್ಮಹತ್ಯೆಯಂತ ಕೆಲಸಕ್ಕೆ ಮುಂದಾಗಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದರು. ಅಲ್ಲದೆ ಸರಕಾರ ದಿಂದ ದೊರೆಯುವ ಪರಿಹಾರವನ್ನು ಕುಟುಂಬಕ್ಕೆ ಕೊಡಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದಪ್ಪ ಯಾದವ್, ಕುಮಾರಸ್ವಾಮಿ ಗುಡ್ಡಡಗಿ, ಮಾನಪ್ಪ ಕಮತ್ ಜಾಲಿಬೆಂಚಿ, ಸಲೀಂ ಸಾಬ್, ಹನುಮಂತ ಹೂಗಾರ, ವೆಂಕಟೇಶ ಕಲಾಲ್, ಶರಣಪ್ಪ ಕೋಳಿಹಾಳ, ದೇವಿಂದ್ರರಡ್ಡಿ ಕೋಳಿಹಾಳ, ಸುರೇಶ್ ಯಾದವ್, ಹನುಮೇಶ ಯಾದವ್, ಮಲ್ಲಿಕಾರ್ಜುನರಡ್ಡಿ ಕೋಳಿಹಾಳ, ಮುದುಕಪ್ಪ ಕೋಳಿಹಾಳ, ವೆಂಕಟೇಶ್ವರ ರಾವೂರ್, ಮಹೇಶ ಶಾಬಾದಿ ಇತರರಿದ್ದರು.