ಯಾದಗಿರಿ | ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಮಾಳಿಕೇರಿ ಅವರಿಗೆ ಸನ್ಮಾನ
ಯಾದಗಿರಿ : ಕಾಯಕ ನಿಷ್ಠೆಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನ,ಮಾನ ಸಿಗುತ್ತವೆ ಎಂಬುವುದಕ್ಕೆ ಸ್ಯಾಮಸನ್ ಮಾಳಿಕೇರಿ ಅವರಿಗೆ ಪ್ರಧಾನ ಕಾರ್ಯದರ್ಶಿ ಎಂತಹ ಹೊಸ ಹೊಣೆಗಾರಿಕೆ ನೀಡಿದ್ದೆ ಸಾಕ್ಷಿ ಎಂದು ಮಾದಿಗ ಸಮಾಜದ ಹಿರಿಯ ಮುಖಂಡರಾದ ನಿಂಗಪ್ಪ ವಡ್ನಳ್ಳಿ ಹೇಳಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕಗೊಂಡ ಮಾಳಿಕೇರಿಯವರನ್ನು ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶುಕ್ರವಾರ ಮಾದಿಗ ಸಮಾಜದಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅತಿಥಿಗಾಗಿ ಅವರು ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಸ್ಯಾಮಸನ್ ಅವರು ಪಕ್ಷದ ಸಂಘಟನೆಗೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಇದನ್ನು ಗಮನಿಸಿ ಪಕ್ಷ ಹೆಚ್ಚಿನ ಹುದ್ದೆ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿದ ನೂತನ ಪ್ರಧಾನ ಕಾರ್ಯದರ್ಶಿ ಸ್ಯಾಮಸನ್ ಮಾತನಾಡಿ, ಪಕ್ಷದ ನಾಯಕರು ಹೆಚ್ಚಿನ ಬಲ ನೀಡಿದ್ದಾರೆ. ಎಲ್ಲರ ಸಹಕಾರದಿಂದ ಜಿಲ್ಲೆಯಲ್ಲಿ ಪಕ್ಷ ಕಟ್ಟಲು ನಿರಂತರ ಕೆಲಸ ಮಾಡುವುದಾಗಿ ಹೇಳಿದರು.
ಲಿಂಗಪ್ಪ ಹತ್ತಿಮನಿ, ಚನ್ನಯ್ಯ ಮಾಳಿಕೇರಿ ಮಾತನಾಡಿದರು.
ಈ ಸಂದರ್ಭದಲ್ಲಿ ಖಂಡಪ್ಪ ದಾಸನ್, ಶಾಂತರಾಜ್ ಮೋಟ್ನಳ್ಳಿ, ಎಮ್ ಕೆ ಬಿರನೂರ್, ಗೋಪಾಲ ದಾಸನಕೇರಿ, ಡಾ. ಭೀಮರಾಯ ಲಿಂಗೇರಿ, ಸ್ವಾಮಿದೇವ ದಾಸನಕೇರಿ, ಪರಮರಡ್ಡಿ ಕಂದಕೂರ್, ಸೋಪ್ಪಣ್ಣ ಮಾಸ್ಟರ್, ಭೀಮರಾಯ ಹಬ್ಬಳಿ, ಸಾಬಣ್ಣ ಸೈದಾಪೂರ್ ಅನೀಲ ಕುಮಾರ ಬೆಳಗುಂದಿ, ಭೀಮಾಶಂಕರ ಆಲ್ದಾಳ, ಮೈಲಾರಿ ಜಾಗಿದ್ದಾರ್, ಹಣಮಂತ ಲಿಂಗೇರಿ, ನಾಗರಾಜ ಸಿ ದಾಸನಕೇರಿ, ಸುಭಾಷ ಮಾಳಿಕೇರಿ, ಮಂಜುನಾಥ ಎಮ್ ದಾಸನಕೇರಿ, ಆಂಜನೇಯ ಬಬಲಾದ, ಮಲ್ಲಿಕಾರ್ಜುನ ಕನ್ನಡಿ, ದುರ್ಗಪ್ಪ ಪೂಜಾರಿ, ಭಾಸ್ಕರ್ ರಾಮಸಮುದ್ರ, ನಾಗರಾಜ ವೈ ಮಾಳಿಕೇರಿ, ರಾಜು ಪೂಜಾರಿ ಇದ್ದರು.