×
Ad

ಯಾದಗಿರಿ | ತಿಂಥಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ʼಕಲಿಕಾ ಹಬ್ಬʼ

Update: 2025-03-01 19:52 IST

ಸುರಪುರ : ತಾಲೂಕಿನ ತಿಂಥಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕ್ಲಷ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಮೌನೇಶ್ವರ ದೇವಸ್ಥಾನದ ಅಜೇಂದ್ರ ಮಹಾಸ್ವಾಮೀಜಿ, ನಾಗಲಿಂಗ ಮಹಾಸ್ವಾಮೀಜಿ ಹಾಗೂ ಮುದ್ದೇಬಿಹಾಳ ವಿಶ್ವಜ್ಯೋತಿ ಶಕ್ತಿ ಪೀಠದ ಶಿವಾನಂದ ಗುರೂಜಿ ವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿದ ಬಿಇಓ ಯಲ್ಲಪ್ಪ ಕಾಡ್ಲೂರ ಮಾತನಾಡಿ, ಹಿಂದೆ ಶಿಕ್ಷಕರಿಗೆ ಬಹಳ ಗೌರವವಿತ್ತು,ಆದರೆ ಇಂದು ಅದು ಕಡಿಮೆಯಾಗುತ್ತಿದೆ. ಇದರ ಮಧ್ಯದಲ್ಲಿ ಶಿಕ್ಷಕರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಗಂಗಾಧರ ನಾಯಕ ಮಾತನಾಡಿ, ಸರಕಾರದ ಯಾವುದೇ ಕಾರ್ಯಕ್ರಮ ಸದುಪಯೋಗಗೊಳ್ಳಲು ಮಕ್ಕಳು ಹಾಗೂ ಪಾಲಕರು ಸಕ್ರೀಯವಾಗಿ ಭಾಗವಹಿಸಬೇಕು ಎಂದರು.

ಶಾಲೆಯ ಮುಖ್ಯಗುರು ಅಮರೇಶ ಹುಜರತ್ತಿ ಮಾತನಾಡಿ, ಪ್ರತಿಯೊಂದು ಮಗು ಶಾಲೆ ಕಲಿತು ಏನಾದರು ಸಾಧನೆ ಮಾಡಬೇಕು ಎನ್ನುವ ಛಲ ಹೊಂದಿರಬೇಕು, ಅದರಂತೆ ಓದಿನಲ್ಲಿ ಗುರಿಯನ್ನಿಟ್ಟುಕೊಂಡು ಕಲಿತಲ್ಲಿ ಉನ್ನತ ಸ್ಥಾನ ಮಾನಗಳನ್ನು ಹೊಂದಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ರತ್ನರಾಜ ಸಾಲಿಮನಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಆರ್‌ಸಿ ಖಾದರ್ ಪಟೇಲ್, ಪ್ರೌಢಶಾಲೆ ಮುಖ್ಯೋಪಾದ್ಯಾಯ ಬಸವರಾಜ ಗೋಗಿ, ಎಸ್‌ಡಿಎಮ್‌ಸಿ ಅಧ್ಯಕ್ಷ ಬಸವರಾಜ ಕವಲ್ದಾರ್, ಮಾಜಿ ತಾ.ಪಂ ಸದಸ್ಯ ಮಲ್ಲಿಕಾರ್ಜುನ ಸಾಹುಕಾರ, ಎಸ್‌ಡಿಎಮ್‌ಸಿ ಅಧ್ಯಕ್ಷ ಗಫೂರ್ ಸಾಬ್, ಯಂಕಪ್ಪ ಬೂದಗುಂಪಿ, ಭೀಮಣ್ಣ ಹುಲ್ಲೂರ,ಈರಣ್ಣ ತಳವಾರ, ಭೀಮಣ್ಣ ಗಿರಣಿ, ಹನುಮಂತರಾಯಗೌಡ, ತಿರುಪತಿ ಅರಳಹಳ್ಳಿ ವೇದಿಕೆಯಲ್ಲಿದ್ದರು. ಯಮನಪ್ಪ ಶಿಕ್ಷಕ ಸ್ವಾಗತಿಸಿದರು, ಅಮರೇಶ ಹುಜರತ್ತಿ ನಿರೂಪಿಸಿದರು, ರಮೇಶ ಶಿಕ್ಷಕ ವಂದಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News