ಯಾದಗಿರಿ | ಅಧಿಕಾರದ ಸದ್ಬಳಕೆ ಮಾಡಿಕೊಂಡು ಜನಸೇವೆ ಮಾಡಿ : ರಾಚನಗೌಡ ಸಲಹೆ
ಯಾದಗಿರಿ : ನಮಗೆ ಸಿಕ್ಕ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಜನಸೇವೆ ಮಾಡಬೇಕು ಎಂದು ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ್ ಸಲಹೆ ನೀಡಿದರು.
ತಾಲೂಕಿನ ಹೆಡಗಿಮದ್ರಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿರೂಪಾಕ್ಷಯ್ಯಾ ಸ್ವಾಮಿ ಅವರಿಗೆ ಅಭಿನಂದಿಸಿ ಮಾತನಾಡಿ, ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಭಾಗದ ಜನರ ಅನುಕೂಲಕ್ಕಿವೆ. ಸರ್ಕಾರದಿಂದ ಬಂದ ಸೌಲಭ್ಯಗಳನ್ನು ಸಕಾಲದಲ್ಲಿ ಫಲಾನುಭವಿಗಳಿಗೆ ತಲುಪಿಸಿ ಎಂದರು.
ಯುವ ನಾಯಕ ಮಹೇಶರಡ್ಡಿ ಮುದ್ನಾಳ ಮಾತನಾಡಿ, ಯುವಕರು ರಾಜಕೀಯಕ್ಕೆ ಬರುವ ಅವಶ್ಯಕತೆ ಇದೆ. ವಿರೂಪಾಕ್ಷಯ್ಯಾ ನೂತನ ಅಧ್ಯಕ್ಷರಾಗಿರುವುದು ಸಂತಸದ ಸಂಗತಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತೆ ಕಿವಿಮಾತು ಹೇಳಿದರು.
ಈ ವೇಳೆ ಮಾತನಾಡಿದ ಮಠಪತಿ, ಬಿಜೆಪಿ ಹಿರಿಯ ನಾಯಕ ರಾಚನಗೌಡ ಮುದ್ನಾಳ್ ಮತ್ತು ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್ ಮತ್ತು ಸಂಘದ ಸರ್ವ ಸದಸ್ಯರ ಸಹಕಾರದಿಂದ ಅಧ್ಯಕ್ಷನಾಗಿದ್ದೇನೆ. ನನ್ನ ಅವಧಿಯಲ್ಲಿ ಸಂಘವನ್ನು ರಚನಾತ್ನಕವಾಗಿ ಮುನ್ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಲಕ್ಷ್ಮಣ್ ಅರಿಕೇರಿ, ಸದಸ್ಯ ಸಿದ್ರಾಮರಡ್ಡಿ ಅಣಿಬಿ,ನಿಂಗಪ್ಪ ತಳಕ, ಬಲವಂತಪ್ಪ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯ ಸಾಬಯ್ಯ ಬೈರಿ,ಚನ್ನಬಸರಡ್ಡಿ ಠಾಣಗುಂದಿ,ಸದಶಿವರಡ್ಡಿ ಅಣಿಬಿ,ಅನಂತಪ್ಪ ಹುಲಿಕಲ್,ಸಂತೋಷ ನಾಟೇಕರ, ಸುನಿಲ್ ಸಣ್ಣೆಪನೋರ, ಸಿದ್ರಾಮರಡ್ಡಿ ತಂಗಡಿ,ಶರಣುಗೌಡ ಗಡ್ಡೆಸುಗುರ, ವಿರುಪಾಕ್ಷ ಹುಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು....