×
Ad

ಯಾದಗಿರಿ | ಗುರುಕುಲ ವಿದ್ಯಾಪೀಠ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Update: 2025-03-02 18:20 IST

ಸೈದಾಪುರ : ಇತ್ತೀಚೆಗೆ ವಿಜ್ಞಾನ ಪ್ರಪಂಚಕ್ಕೆ ವರದೊಂದಿಗೆ ಶಾಪವೂ ಆಗಿದೆ ಎಂದು ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕಿ ಮಹೇಶ್ವರಿ ಅಭಿಪ್ರಾಯಪಟ್ಟರು.

ಪಟ್ಟಣದ ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿಜ್ಞಾನವು ಮನುಷ್ಯನಲ್ಲಿ ಸೃಜನಶೀಲತೆಯನ್ನು ಬೆಳೆಸಿ, ಉತ್ತಮ ಜೀವನ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ವಿಜ್ಞಾನದಿಂದ ಪ್ರತಿಯೊಬ್ಬರಲ್ಲಿ ವೈಚಾರಿಕ ಮನೋಭಾವನೆ ಬೆಳೆಯುತ್ತಿದೆ. ಸರಿ ತಪ್ಪುಗಳನ್ನು ಗುರುತಿಸಿ ವಿದ್ಯಾರ್ಥಿ ದಿಸೆಯಲ್ಲಿ ಸೃಜನಶೀಲತೆ ಅಳವಡಿಸಿಕೊಂಡರೆ ಹೊಸ ಬದಕನ್ನು ಕಾಣಲು ಸಾಧ್ಯವಾಗುತ್ತದೆ. ಇದಕ್ಕೆ ವಿಜ್ಞಾನ ನೆರವಾಗಿದೆ ಎಂದು ಹೇಳಿದರು.

ನಂತರ ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಮಾತನಾಡಿದರು.

ಇದಕ್ಕೂ ಮೊದಲು ಸಿರಿಧಾನ್ಯಗಳು ಮಹತ್ವ, ಮನುಷ್ಯನ ಜೀರ್ಣಾಂಗವ್ಯೂಹ, ಜ್ವಾಲಾಮುಖಿಯ ಉದ್ಭವ, ವಿದ್ಯುತ್ ಪ್ರವಾಹ, ನೀರಿನಲ್ಲಿ ತೇಲುವ ಮತ್ತು ಕರಗುವ ವಸ್ತುಗಳ ಗುಣಧರ್ಮಗಳು ಸೇರಿದಂತೆ ಹಲವು ರೀತಿಯಲ್ಲಿ ಪ್ರಯೋಗಗಳ ಮೂಲಕ ತಿಳಿಸಿಕೊಟ್ಟರು. ನಂತರ ಡಾ.ವಿ.ರಾಮನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ವಿಜ್ಷಾನ ವಿಷಯವನ್ನು ಬೋಧನೆ ಮಾಡುವ ಶಿಕ್ಷಕಿಯರಾದ ಮಹೇಶ್ವರಿ ಮತ್ತು ಹೃತಿಕಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ, ಮಹೇಶ್ವರಿ, ಮರಿಲಿಂಗಮ್ಮ, ಆಸೀಫಾ, ಸಾನಿಯಾ ಸಮರೀನ್, ಸ್ವಾತಿ, ನಾಗಮ್ಮ, ಆನಂದು ಕೃಷ್ಣಾ, ಹೃತಿಕಾ, ಶ್ರೀದೇವಿ, ಸಹಾಯಕಿ ಸುಕುಮಾರಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News