×
Ad

ಯಾದಗಿರಿ | ದೇಶದ ಅಭಿವೃದ್ಧಿಗೆ ನೆಹರು ಅವರ ಕೊಡುಗೆ ಅಪಾರ : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

Update: 2025-05-27 21:51 IST

ಯಾದಗಿರಿ : ದೇಶದ ಅಭಿವೃದ್ಧಿಗೆ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಕೊಡುಗೆ ಅಪಾರವಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೆಹರು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯದ ನಂತರ ದೇಶ ಮುನ್ನಿಡಿಸುವುದು ಸವಾಲಿನ‌ ಕೆಲಸವಾಗಿತ್ತು. ಜನರ ರಕ್ಷಣೆ, ಆರೋಗ್ಯ, ನೀರಾವರಿ, ಶಿಕ್ಷಣ ಹೀಗೆ ಸಾರ್ವಜನಿಕ ಕೆಲಸಗಳನ್ನು ಶಿಸ್ತುಬದ್ಧವಾಗಿ ಎಲ್ಲರೊಂದಿಗೆ ಸೇರಿ ಮಾಡಿದ ಕೀರ್ತಿ ನೆಹರು ಅವರಿಗೆ ಸಲ್ಲುತ್ತದೆ. ದೇಶಕ್ಕಾಗಿ ತನು, ಮನ ಮತ್ತು ಧನವನ್ನು ನೀಡಿದ ಅಪ್ರತಿಮ ವ್ಯಕ್ತಿ ಮತ್ತು ಎಂದು ಶಾಸಕರು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕ, ತಾಲೂಕು ಘಟಕ, ಬ್ಲಾಕ್ ಘಟಕಗಳ ಪದಾಧಿಕಾರಿಗಳು ಸೇರಿದಂತೆಯೇ ಅನೇಕ ಕಾರ್ಯಕರ್ತರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News