×
Ad

ಯಾದಗಿರಿ | ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ರಾಜಶೇಖರಯ್ಯ ಸ್ವಾಮಿ ಅವಿರೋಧ ಆಯ್ಕೆ

Update: 2025-03-02 18:25 IST

ಯಾದಗಿರಿ : ವರ್ಕನಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸಂಘದ ಅಧ್ಯಕ್ಷರಾಗಿ ರಾಜಶೇಖರಯ್ಯ ಸ್ವಾಮಿ ಮುಷ್ಟೂರು ಹಾಗೂ ಉಪಾಧ್ಯಕ್ಷರಾಗಿ ಮಲ್ಲೇಶ ಬಾವೂರ ಪಗಲಾಪೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಾದ ಗುತ್ತಣ್ಣ ಗೌಡ ಘೋಷಣೆ ಮಾಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜಶೇಖರಯ್ಯ ಸ್ವಾಮಿ ಮುಷ್ಟೂರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಏಕೈಕ ಅಭ್ಯರ್ಥಿಗಳಾಗಿ ಚುನಾವಣಾಧಿಕಾರಿಗಳಿಗೆ ಅವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಪರಿಶೀಲನೆ ಮಾಡಿ ಈ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಸಭೆಯಲ್ಲಿ ಘೋಷಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ರಾಜಶೇಖರಯ್ಯ ಸ್ವಾಮಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಮಲ್ಲಣ್ಣಗೌಡ ಎಮ್.ಹೊಸಳ್ಳಿ, ಕಾಶಪ್ಪ ಮಸ್ಕನಳ್ಳಿ, ದೇವರಾಜ ಬಳಿಚಕ್ರ, ರವಿ ವರ್ಕನಳ್ಳಿ, ಶರಣಯ್ಯ ಕೂಯಿಲೂರು, ರಾಮಯ್ಯ ಕಲ್ಯಾಣಿ, ರಸೂಲಬಿ ಮುಷ್ಟೂರ ಹಾಗೂ ಗ್ರಾಮದ ಮುಖಂಡರಾದ ಮಾರೆಪ್ಪ ವಡ್ಡರ, ವರ್ಕನಳ್ಳಿ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಶರಣಪ್ಪ ಬಳಿಚಕ್ರ, ಭೀಮರೆಡ್ಡಿ ಎಮ್ ಹೊಸಳ್ಳಿ, ಯಂಕಪ್ಪ ಎಮ್ ಹೊಸಳ್ಳಿ, ಬಾಪುಗೌಡ ಕೂಯಿಲೂರು, ಮೋನಪ್ಪ ಉಪ್ಪಾರ, ಬಾಲಪ್ಪ ಕೂಯಿಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ರಾಘವೇಂದ್ರ ಕಲಾಲ ಹಾಗೂ ಗ್ರಾಮಸ್ಥರು ಸಂಘದ ಸದಸ್ಯರು ಭಾಗವಹಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆ ನಂತರ ಬಿಜೆಪಿ ಹಿರಿಯ ಮುಖಂಡರಾದ ರಾಚಣಗೌಡ ಮುದ್ನಾಳ ಮತ್ತು ಮಹೇಶರೆಡ್ಡಿ ಗೌಡ ಮುದ್ನಾಳ ಅವರಿಗೆ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಸನ್ಮಾನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News