ಯಾದಗಿರಿ | ಜೆಡಿಎಸ್ ಚುನಾವಣಾಧಿಕಾರಿಯಾಗಿ ಶಿರವಾರ ನೇಮಕ
ಯಾದಗಿರಿ : ಜನತಾದಳ (ಜಾತ್ಯತೀತ) ಪಕ್ಷದ 2024-26ರ ಸಾಂಸ್ಥಿಕ ಚುನಾವಣೆಗಳ ಮೇಲ್ವಿಚಾರಣೆಗಾಗಿ ಸಾಂಸ್ಥಿಕ ಚುನಾವಣೆಗಳ ಜಿಲ್ಲಾ ಚುನಾವಣಾಧಿಕಾರಿಯನ್ನಾಗಿ ವಿಶ್ವನಾಥ ಶಿರವಾರ ರವರನ್ನು ನೇಮಕ ಮಾಡಿ ರಾಜ್ಯ ಜೆಡಿಎಸ್ ಚುನಾವಣಾಧಿಕಾರಿ ಕೆ.ಎ.ತಿಪ್ಪೆಸ್ವಾಮಿ ಆದೇಶ ಹೊರಡಿಸಿದ್ದಾರೆ.
ಗುರುಮಠಕಲ್ ಶಾಸಕರಾದ ಶರಣಗೌಡ ಕಂದಕೂರ ಹಾಗೂ ಯಾದಗಿರಿ ಜನತಾದಳ (ಜಾತ್ಯತೀತ) ಪಕ್ಷದ ಅಧ್ಯಕ್ಷರಾದ ಸುಭಾಶ್ಚಂದ್ರ ಕಟಕಟ ಹೊನಗೇರಾರವರ ಶಿಫಾರಸ್ಸಿನ ಮೇರೆಗೆ ತಮ್ಮನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜನತಾದಳ (ಜಾತ್ಯತೀತ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಂದ ಅನುಮೋದಿತವಾದ ಚುನಾವಣಾ ವೇಳಾಪಟ್ಟಿಯನ್ನು ಲಗತ್ತಿಸಿದೆ. ಈ ವೇಳಾಪಟ್ಟಿಯಂತೆ ಚುನಾವಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಚುನಾವಣಾ ಪ್ರಕ್ರಿಯೆಗಳನ್ನು ಪಕ್ಷದ ಸಂವಿಧಾನ ಮತ್ತು ನಿಯಮಗಳನ್ವಯ ನಿಗದಿ ಪಡಿಸಿದ ಸಮಯದೊಳಗೆ ನಿಷ್ಪಕ್ಷಪಾತದಿಂದ ನಡೆಸಿ, ಫಲಿತಾಂಶವನ್ನು ಪಕ್ಷದ ರಾಜ್ಯ ಕಛೇರಿಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ಜಿಲ್ಲಾ ಜೆಡಿಎಸ್‌ನಿಂದ ವಿಶ್ವನಾಥ ಶಿರವಾರಗೆ ಸನ್ಮಾನ :
ಯಾದಗಿರಿ : ಜಿಲ್ಲಾ ಜನತಾದಳ (ಜಾತ್ಯತೀತ) ಪಕ್ಷದ ಸಾಂಸ್ಥಿಕ ಚುನಾವಣೆಗಳ ಜಿಲ್ಲಾ ಚುನಾವಣಾಧಿಕಾರಿಯನ್ನಾಗಿ ನೇಮಕಗೊಂಡ ವಿಶ್ವನಾಥ ಶಿರವಾರ ರವರನ್ನು ಯಾದಗಿರಿ ಜಿಲ್ಲಾ ಜೆಡಿಎಸ್ ಘಟಕದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಮಾಜಿ ಜಿಲ್ಲಾಧ್ಯಕ್ಷರಾದ ಚನ್ನಪ್ಪಗೌಡ ಮೂಸಂಬಿ, ಪ್ರಮುಖರಾದ ಭೋಜಣ್ಣಗೌಡ ಯಡ್ಡಳ್ಳಿ, ಈಶಪ್ಪ ಸಾಹುಕಾರ, ಬಂದಪ್ಪ ಸಾಹುಕಾರ ಅರಳಿ, ಮಲ್ಲಣ್ಣಗೌಡ ಕೌಳೂರ, ಈಶ್ವರ ನಾಯಕ, ಅಂಬರೇಶಗೌಡ ಬಂದಳ್ಳಿ, ತಾಯಪ್ಪ ಬದ್ದೆಪಲ್ಲಿ, ಶರಣು ಗಾಡಿ, ವೆಂಕಟರಮಣ ಮೊಟ್ನಳ್ಳಿ, ನರಸಿಂಹರಡ್ಡಿ ಚಿಂತಗುAಟಾ ಸೇರಿದಂತೆ ಇತರರಿದ್ದರು.