ಯಾದಗಿರಿ | ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನಗಳಿಸಿದ ವಿದ್ಯಾರ್ಥಿನಿಗೆ ಸನ್ಮಾನ
ಯಾದಗಿರಿ : ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 622 ಅಂಕಗಳಿಸಿ ಯಾದಗಿರಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ನಾಲ್ಕನೇ ಸ್ಥಾನಗಳಿಸಿದ ವಿದ್ಯಾರ್ಥಿನಿ ನಿಷ್ಠಾ ಚನ್ನರಾಜು ದಮ್ಮಣ್ಣನವರ್ ಹಾಗೂ ಅವನ ಪೋಷಕರಿಗೆ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ್ ಸಾಹುಕಾರ ಸನ್ಮಾನಿಸಿ, ಅಭಿನಂದಿಸಿದರು.
ನಂತರ ಮಾತನಾಡಿದ ಅವರು, ಭವಿಷ್ಯದ ಮುಂಬರುವ ದಿನಗಳಲ್ಲಿ ಇನ್ನು ಹೀಗೆ ಯಾದಗಿರಿ ಜಿಲ್ಲೆಗೆ ನಿಮ್ಮಿಂದ ಹೆಚ್ಚಿನ ಕೀರ್ತಿ ದೊರೆಯುವಂತಾಗಲಿ, ನಿಷ್ಠಾ ವಿದ್ಯಾರ್ಥಿನಿಯ ಸಾಧನೆಯಿಂದ ಜಿಲ್ಲೆಯ ಇನ್ನುಳಿದ ವಿದ್ಯಾರ್ಥಿಗಳು ಸ್ಫೂರ್ತಿಗೊಂಡು ಉತ್ತಮ ಸಾಧನೆ ಮಾಡುವ ಮೂಲಕ, ಯಾದಗಿರಿ ಜಿಲ್ಲೆಗೆ ಅಂಟಿಕೊಂಡಿರುವ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ತೊಳೆಯುವಂತಾಗಲಿ ಎಂದರು.
ಈ ವೇಳೆ ಬಿಜೆಪಿ ಯುವಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಮೌನೇಶ ಬೆಳಗೇರ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಿ. ಮಲ್ಲು ಕೋಲಿವಾಡ, ಮಜುನಾಥ ಗುತ್ತೇದಾರ, ಮಹಾದೇವಪ್ಪ ಹೋನಗೇರ, ಶರಣು ಬಳಿಚಕ್ರ, ಶಂಕರ್ ಬಸನಾಯಕ, ಆನಂದ ಸಾಹುಕಾರ, ಸುನಿಲ್ ಕುಮಾರ ಸೇರಿದಂತೆ ಇತರರು ಇದ್ದರು.