ಯಾದಗಿರಿ: ತಾಂತ್ರಿಕ ದೋಷದಿಂದ ಹತ್ತಿ ಖರೀದಿ ತಾತ್ಕಾಲಿಕ ಸ್ಥಗಿತ
Update: 2025-02-19 23:21 IST
ಜಿಲ್ಲಾಧಿಕಾರಿ ಡಾ. ಸುಶೀಲಾ.ಬಿ.
ಯಾದಗಿರಿ: ಯಾದಗಿರಿ ಜಿಲ್ಲೆಯ ರೈತ ಬಾಂಧವರಿಗೆ 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆಯಲ್ಲಿ ಭಾರತೀಯ ಹತ್ತಿ ನಿಗಮ ಘಟಕ, ಹುಬ್ಬಳ್ಳಿ ಇವರು, ಯಾದಗಿರಿ ಜಿಲ್ಲೆಯಲ್ಲಿ ಘೋಷಿತ ಹತ್ತಿ ಖರೀದಿ ಕೇಂದ್ರಗಳಲ್ಲಿ, ಸರ್ಕಾರದ ಬೆಂಬಲ ಬೆಲೆ ಯೋಜನೆಯಲ್ಲಿ ಹತ್ತಿ ಖರೀದಿಯನ್ನು ತಾಂತ್ರಿಕ ದೋಷದಿಂದ ತಾತ್ಕಾಲಿಕವಾಗಿ 2025ರ ಫೆಬ್ರವರಿ 9 ರಿಂದ ಸ್ಥಗಿತಗೊಳಿಸಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ಡಾ. ಸುಶೀಲಾ.ಬಿ.ಅವರು ತಿಳಿಸಿದ್ದಾರೆ.
ಹತ್ತಿ ಖರೀದಿಯ ಮುಂದಿನ ದಿನಾಂಕವನ್ನು ತಿಳಿಸಲಾಗುವುದು. ಅಲ್ಲಿಯವರೆಗೆ ಖರೀದಿ ಕೇಂದ್ರಕ್ಕೆ ಹತ್ತಿಯನ್ನು ತರಬಾರದೆಂದು ತಿಳಿಸಲಾಗಿದ್ದು, ತಾಂತ್ರಿಕ ದೋಷ ನಿವಾರಣೆಯಾದ ಕೂಡಲೇ ಹತ್ತಿ ಖರೀದಿಯನ್ನು ಆರಂಭಿಸಲಾಗುವುದು. ರೈತರು ಆತಂಕಕ್ಕೆ ಒಳಗಾಗದೆ, ಶಾಂತತೆಯನ್ನು ಕಾಯಲು ಜಿಲ್ಲಾಧಿಕಾರಿಗಳು ಪ್ರಕಟಣೆ ಮೂಲಕ ಕೋರಿದ್ದಾರೆ.