ಯಾದಗಿರಿ | ಲಾರಿ-ಕಾರಿನ ನಡುವೆ ಅಪಘಾತ : ಕಾರು ಚಾಲಕ ಮೃತ್ಯು
Update: 2025-02-28 15:09 IST
ಯಾದಗಿರಿ : ಜಿಲ್ಲೆಯ ವಡಗೇರಾ ತಾಲ್ಲೂಕಿನ ತಡಿಬಿಡಿ ಗ್ರಾಮದಿಂದ ಅನತಿ ದೂರದಲ್ಲಿ ಲಾರಿ ಮತ್ತು ಕಾರಿನ ನಡುವೆ ಅಪಘಾತವಾಗಿ ಸಂಭವಿಸಿ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಬಸಲಿಂಗಪ್ಪ(27) ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ
ಶುಕ್ರವಾರ ಬೆಳಿಗ್ಗೆ ಸುಮಾರು 7 ಗಂಟೆಯ ಸಮಯದಲ್ಲಿ ಯಾದಗಿರಿ ಕಡೆಯಿಂದ ಸುರಪುರದ ಕಡೆಗೆ ಹೊರಟಿದ್ದ ಕಾರು ಖಾನಾಪೂರ ಗ್ರಾಮವನ್ನು ದಾಟಿ ತಡಿಬಿಡಿ ಗ್ರಾಮವು ಅನತಿ ದೂರದಲ್ಲಿಯೆ ಇರುವಾಗ ಕಾರಿನ ಎದುರಿಗೆ ಅಡ್ಡ ಬಂದ ಎಮ್ಮೆಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕಾರು ಚಾಲಕ ಕಾರನ್ನು ಬಲಕ್ಕೆ ತಿರುಗಿಸಿದಾಗ ಎದುರಿಗೆ ಬಂದ ಲಾರಿಗೆ ನೇರವಾಗಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಪ್ರಕರಣವನ್ನು ವಡಗೇರಾ ಪೊಲೀಸ ಠಾಣೆಯಲ್ಲಿ ದಾಖಲಿಕೊಂಡು ಪಿಎಸ್ಐ ಮಹೆಬೂಬಅಲಿ ತನಿಖೆಯನ್ನು ಕೈಗೊಂಡಿದ್ದಾರೆ.