×
Ad

ಯಾದಗಿರಿ | ಎರಡನೇ ಅವಧಿಗೆ ನೂತನ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಉಮೇಶ್ ಕೆ.ಮುದ್ನಾಳ್‌ ನೇಮಕ : ದತ್ತಾತ್ರೇಯರೆಡ್ಡಿ

Update: 2025-05-16 16:20 IST

ಯಾದಗಿರಿ : ಅಖಿಲ ಭಾರತ ಕೋಲಿ ಸಮಾಜದ ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಎರಡನೇ ಬಾರಿಗೆ ಉಮೇಶ್ ಮುದ್ನಾಳ ಅವರು ಆಯ್ಕೆಯಾಗಿದ್ದಾರೆ.

ಅಖಿಲ ಭಾರತ ಕೋಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ವೀರೇಂದ್ರ ಕಶೆಪ ರವರು ಆಯ್ಕೆಯಾಗಿದ್ದು, ಕರ್ನಾಟಕ ರಾಜ್ಯ ಸಮಿತಿಗೆ ನೂತನ ಅಧ್ಯಕ್ಷರನ್ನಾಗಿ ವಕೀಲರಾದ ದತ್ತಾತ್ರೇಯ ರೆಡ್ಡಿ ಮುದಿರಾಜ ರವರನ್ನು ರಾಷ್ಟ್ರೀಯ ಅಧ್ಯಕ್ಷರ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಅವರ ನಿರ್ದೇಶನದ ಮೇರೆಗೆ ರಾಜ್ಯಾದ್ಯಕ್ಷರಾದ ದತ್ತಾತ್ರೇಯ ರೆಡ್ಡಿ ಮುದರಾಜರವರು ಕರ್ನಾಟಕ ರಾಜ್ಯ ಸಮಿತಿ ಸಂಘಟನಾ ಕಾರ್ಯದರ್ಶಿಗಳಾಗಿ ಕೋಲಿ ಸಮಾಜದ ಮುಖಂಡ ಉಮೇಶ್ ಮುದ್ನಾಳ ಅವರು ಆಯ್ಕೆಯಾಗಿದ್ದಾರೆ.

ಸಂಘದ ರಾಜ್ಯ ಅಧ್ಯಕ್ಷರಾದ ದತ್ತಾತ್ರೇಯರೆಡ್ಡಿ ಮುದರಾಜ ಅವರು ಗುರುವಾರ ಯಾದಗಿರಿ ತಾಲೂಕಿನ ಮುದ್ನಾಳ ಗ್ರಾಮದ ಉಮೇಶ್ ಮುದ್ನಾಳ ಅವರ ನಿವಾಸದಲ್ಲಿ ಸಭೆ ನಡೆಸಿ ಈ ಬಗ್ಗೆ ಉಮೇಶ್ ಮುದ್ನಾಳ ಆಯ್ಕೆ ಘೋಷಣೆ ಮಾಡಿದರು.

ಈ ವೇಳೆ ಟಿ.ಡಿ.ರಾಜು, ರಾಜಗೋಪಾಲರೆಡ್ಡಿ,ಮಲ್ಲೇಶ ಪಸಪುಲ್,ಪವನ ಮುದ್ನಾಳ ಸೇರಿದಂತೆ ಅನೇಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News