×
Ad

ಯಾದಗಿರಿ | ವಿದ್ಯಾವರ್ಧಕ ಸಂಘವು ಕಲ್ಯಾಣ ಕರ್ನಾಟಕಕ್ಕೆ ಹೆಚ್ಚು ಡಾಕ್ಟರ್, ಇಂಜಿನಿಯರ್‌ಗಳನ್ನು ನೀಡಿದೆ : ಸಿ.ಎಸ್.ಮುಧೋಳ

Update: 2025-02-25 18:35 IST

ಸುರಪುರ : ನಗರದ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಲಬುರಗಿ ಸಂಚಾಲಿತ ಶ್ರೀ ಶರಣಬಸವ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ 13ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪ್ರಭುಲಿಂಗ ಮಹಾಸ್ವಾಮಿಗಳು ಕಡ್ಲಪ್ಪನವರ ನಿಷ್ಠಿ ವಿರಕ್ತಮಠ ಸುರಪುರ ಸಂಸ್ಥಾನ ಅವರು ವಹಿಸಿದ್ದರು.

ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯಾದಗಿರಿಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚನ್ನಬಸಪ್ಪ ಮುಧೋಳ ಅವರು, ಶರಬಸವೇಶ್ವರ ವಿದ್ಯಾವರ್ಧಕ ಸಂಘವು ಕಲ್ಯಾಣ ಕರ್ನಾಟಕಕ್ಕೆ ಅತಿ ಹೆಚ್ಚು ಡಾಕ್ಟರ್‌ ಗಳನ್ನು ಮತ್ತು ಇಂಜಿನೀಯರ್‌ ಗಳನ್ನು ನೀಡಿದ ಸಂಸ್ಥೆಯಾಗಿದೆ ಎಂದು ಹೇಳಿದರು.

ಯಾದಗಿರಿ ಜಿಲ್ಲೆಯ ಫಲಿತಾಂಶ ಕಡಿಮೆಯಾಗಿದ್ದು, ಅದನ್ನು ಸುದಾರಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಎಲ್ಲ ಶಾಲೆಗಳಲ್ಲಿ ಹೆಚ್ಚುವರಿ ಸಾಯಂಕಾಲ ತರಗತಿಗಳು ನಡೆಸಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಶರಣಬಸವಪ್ಪ ವ್ಹಿ ನಿಷ್ಠಿ ಮಾತನಾಡಿದರು.

ಈ ಸಂದರ್ಭದಲ್ಲಿ 2023-24ನೇ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸನ್ಮಾನಿಸಲಾಯಿತು.

ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಯನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಭರತ ನಾಟ್ಯದೊಂದಿಗೆ ಪ್ರಾರಂಭಿಸಲಾಯಿತು. ಶ್ರೀಶರಣ ಬಸವೇಶ್ವರರ ಮಹಿಮೆ ವಿದ್ಯಾರ್ಥಿಗಳ ಕಿರು ನಾಟಕವನ್ನು ಎಲ್ಲರ ಗಮನ ಸೆಳೆಯಿತು. ಜನಪದ ಹಾಡುಗಳು, ಸಮಾಜಿಕ ಸಂದೇಶ ನೀಡುವ ಹಾಡುಗಳು, ಪುಟಾಣಿ ಮಕ್ಕಳಿಂದ ಉತ್ತಮ ನೃತ್ಯಗಳು ನಡೆಸಿಕೊಟ್ಟಿದ್ದು ಎಲ್ಲರ ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಎಚ್.ಸತೀಶ ಬಿಇಓ, ಯಲ್ಲಪ್ಪ ಕಾಡ್ಲೂರ ಸುರಪುರ, ಶರಣಬಸವ ಎಮ್ ಗಚ್ಚಿನಮನಿ, ಚೆನ್ನಪ್ಪ ಖ್ಯಾದಗಿ, ಪ್ರಾಂಶುಪಾಲರಾದ ಡಾ.ಶರಣಬಸಪ್ಪ ಸಾಲಿ, ನಾನಾಗೌಡ ದೇಸಾಯಿ, ಚಂದ್ರಶೇಖರ, ಮುಖ್ಯೋಪಾಧ್ಯಾಯ ರೇವಪ್ಪ ಪಾಟೀಲ ಉಪಸ್ಥಿತರಿದ್ದರು. ಶಿಕ್ಷಕರಾದ ಬಸವರಾಜ ಢವಳಗಿ ನಿರೂಪಿಸಿದರು, ರಶ್ಮಿ ಹಿರೇಮಠ ಸ್ವಾಗತಿಸಿದರು ಹಾಗೂ ಶರಣಗೌಡ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News