ಯಾದಗಿರಿ | ಮೂಲಭೂತ ಸೌಕರ್ಯ ನೀಡಲು ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ಯಾದಗಿರಿ : ಜಿಲ್ಲೆಯ ಯಾದಗಿರಿ ಮತಕ್ಷೇತ್ರದ ಮುದ್ನಾಳ ಗ್ರಾಮ ಪಂಚಾಯತಿಗೆ ಬರುವ ಮುದ್ನಾಳ ದೊಡ್ಡ ತಾಂಡಾ ಭೀಮನಗರ ಕಳೆದ ಎಂಟು ವರ್ಷಗಳ ಹಿಂದೆಯೇ ನಿರ್ಮಾಣವಾಗಿರುವ ನೀರಿನ ಮೇಲ್ತೊಟ್ಟಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕ (ಆರೋ ಪ್ಲಾಟ್) 6 ವರ್ಷ ದಿಂದ ಇದುವರೆಗೆ ಉದ್ಘಾಟನೆ ಭಾಗ್ಯ ಕಾಣದೇ ಇರುವುದು ಏಕೆ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ ಪ್ರಶ್ನಿಸಿದ್ದಾರೆ.
ಈ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಅವರು, ಕೈಯಲ್ಲಿ ಕಾಲಿಕೊಡ ಹಿಡಿದು ದಿಢೀರನೆ ಪ್ರತಿಭಟನೆ ನಡೆಸಿದರು. ಮುದ್ನಾಳ ದೊಡ್ಡ ತಾಂಡಾ ಭೀಮನಗರ ಎಂಟು ವರ್ಷಗಳ ಹಿಂದೆಯೇ ನೀರಿನ ಮೇಲ್ತೊಟ್ಟಿ ಶುದ್ಧ ಕುಡಿಯುವ ನೀರಿನ ಘಟಕ (ಆರೋ ಪ್ಲಾಟ್) 6 ವರ್ಷಗಳಿಂದ ನಿರ್ಮಾಣಗೊಂಡು ಸಿದ್ದವಾಗಿದೆ. ಇದುವರೆಗೆ ಉದ್ಘಾಟನೆ ಬಾಗ್ಯ ಕಾರಣದೆ ಜನರಿಗೆ ನೀರಿನ ಸಮಸ್ಯೆಯಾಗುತ್ತಿದೆ. ಕೂಡಲೇ ಇದನ್ನು ತಾಂಡಾದ ನಿವಾನಿಗಳಿಗೆ ಬಳಕೆ ಉಪಯೋಗ ಮಾಡಲು ಸಂಬಂದಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕಳೆದ ಎಂಟು ವರ್ಷಗಳಿಂದ ಗ್ರಾಪಂ, ತಾಪಂ, ಜಿಪಂ ಮತ್ತು ಜಿಲ್ಲಾಡಳಿತ ಭವನದಲ್ಲಿ ಶಾಸಕರ ಸಚಿವರ ಸಭೆಗಳು ನಡೆದರೂ ಸಹ ಈ ಸಮಸ್ಯೆ ಕುರಿತು ಏಕೆ ಚರ್ಚೆ ಆಗಲಿಲ್ಲ. ಒಂದು ಮೇಲ್ತೊಟ್ಟಿ ಶುದ್ಧ ಕುಡಿಯುವ ನೀರಿನ ಘಟಕ (ಆರೋ ಪ್ಲಾಟ್) ನಿರ್ಮಿಸಲು ಯಾರು ಮನವಿ ಮಾಡಿಕೊಂಡಿದ್ದರು ಮತ್ತು ನಿರ್ಮಾಣ ಮಾಡಿದ ಉದ್ದೇಶವೇನು ಹಣ ಎಷ್ಟು ಬಂತು ಖರ್ಚಾಯಿತು, ಯಾರು ಲೂಟಿ ಮಾಡಿದರು ಎಂಬುದು ಮಾಹಿತಿ ಬೇಕು ಎಂದು ಅವರು ಆಗ್ರಹಿಸಿದರು.
ತಾಂಡಾದಲ್ಲಿ ಜೆಜೆ ಕಾಮಗಾರಿ ಪೂರ್ಣಗೊಳ್ಳದೆ ಹಳ್ಳ ಹಿಡಿದೆ. ಗ್ರಾಮಕ್ಕೆ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಅಲ್ಲಿ ಅಲ್ಲಿ ಸೂರಿಕೆಯಾಗಿ ಕಲುಶಿತ ನೀರು ಮಿಶ್ರವಾಗಿ ಸಾಂಕ್ರಮಿಕ ರೋಗದ ಭೀತಿಯಲ್ಲಿ ಜನರು ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಂಡಾದಲ್ಲಿ ಖಾಲಿ ನಿವೇಶನ ಹಾಗೂ ಸಿ.ಸಿ.ರಸ್ತೆ ಚರಂಡಿ ಇಲ್ಲದ ಕಾರಣ ತಗ್ಗು ಗುಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಸ್ಥಾನವಾಗಿ ಮಾರ್ಪಟ್ಟಿದೆ. ತಾಂಡಾದಲ್ಲಿ ವಿದ್ಯುತ ಕಂಬ ಬಾಗಿ ನಿಂತಿದೆ. ವಿದ್ಯುತ್ ತಂತಿ ಕೆಳಗೆ ಜೋತು ಬಿದ್ದು, ಸಾರ್ವಜನಿಕರ ಅನಾಹುತಕ್ಕೆ ಆಹ್ವಾನ ನೀಡುತ್ತಿದೆ. ಕೂಡಲೇ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮೋಹನ್, ಕೇವಲಾ, ಭೀಮು, ಶಂಕರ, ಬಾಬು, ಮಾರುತಿ, ರೂಪ್ಲಾ, ಹೀರಾಸಿಂಗ, ಸಂತೋಷ, ವಿಠ್ಠಲ್, ರಾಜು ಪೂನಿಬಾಯಿ, ಲಕ್ಷ್ಮೀಬಾಯಿ, ಗಂಲಿಬಾಯಿ, ಚನ್ನಮ್ಮ, ಮೋನಿಬಾಯಿ, ಸಕ್ರಿಬಾಯಿ, ಜ್ಯೋತಿ, ಕಮ್ಲಿಬಾಯಿ, ದೇವಿಬಾಯಿ, ಸೋನಿ, ಶಾಂತಿಬಾಯಿ, ನಾಗಿಬಾಯಿ ಸೇರಿದಂತೆ ಅನೇಕರು ಗ್ರಾಮಸ್ಥರು ಉಪಸ್ಥಿತರಿದ್ದರು.