×
Ad

ಯಾದಗಿರಿ | ರಾಜ್ಯದಲ್ಲಿ ಒಟ್ಟು 11.50 ಕೋಟಿ ಸಸಿ ನೆಡಲಾಗುವುದು : ಸಚಿವ ಈಶ್ವರ್‌ ಖಂಡ್ರೆ

Update: 2025-07-28 17:35 IST

ಯಾದಗಿರಿ: ಪ್ರಕೃತಿ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು 11.50 ಕೋಟಿ ಸಸಿ ನೆಟ್ಟು ಅವುಗಳನ್ನು ಪೊಷಿಸಿ ಬೆಳೆಸುವ ಗುರಿ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ಹೊಂದಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆಗಳ ಸಚಿವ ಈಶ್ವರ್‌ ಖಂಡ್ರೆ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಸಚಿವರು ಮಾತನಾಡಿದರು.

ಈ ವರ್ಷ ಮೂರು ಕೋಟಿ ಸಸಿ ನೆಡಲಾಗುವುದು. ಅದರಲ್ಲಿ ಯಾದಗಿರಿ ಜಿಲ್ಲೆಯಲ್ಲಿ 4 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಇದರಲ್ಲಿ ಒಂದು ಲಕ್ಷ ಎತ್ತರದ ಸಸಿಗಳನ್ನು ಹಚ್ಚಲಾಗುವುದು. ಇದು ಕೀಳಲು ಆಗುವುದಿಲ್ಲ ಮತ್ತು ಬಹುಕಾಲ ಬದುಕುತ್ತವೆ ಎಂದರು.

ಇಂದಿನ ಹವಮಾನ ಮನುಕುಲದ ಉಳಿವಿಗೆ ತೊಂದರೆಯಾಗುತ್ತಿದೆ. ಗಿಡ- ಮರಗಳ ಮಾರಣಹೋಮದಿಂದ ಪರಿಸರ ನಾಶವಾಗಿ ಜೀವ, ಜಂತುಗಳು ಸಾಯಿತ್ತಿವೆ. ಮರಗಳಿಂದ ಹೇರಳವಾದ ಆಕ್ಸಿಜನ್ ಸಿಗುತ್ತದೆ. ಇದರಿಂದ ಸಕಲ ಜೀವರಾಶಿಗಳು ಬದಕುಲು ಸಹಾಯವಾಗುತ್ತದೆ ಎಂದು ಸಚಿವರು ಮಾರ್ಮಿಕವಾಗಿ ವಿವರಿಸಿದರು.

ಹವಮಾನದಲ್ಲಿ ಸಾಕಷ್ಟು ವ್ಯತ್ಯಾಸ ಆಗುತ್ತಿರುವುದರಿಂದ ಪ್ರಕೃತಿ ವಿಕೋಪ, ಗುಡ್ಡಗಳ ಕುಸಿತ, ಪ್ರವಾಹ, ತಾಪಮಾನ ಹೆಚ್ಚಾಗುವುದು ನಾವೆಲ್ಲರೂ ಕಾಣುತ್ತಿದ್ದೆವೆ. ಇದರಿಂದ ಅಪಾರ ಜನರು ಜೀವ‌ ಕಳೆದುಕೊಳ್ಳುತ್ತಿದ್ದಾರೆಂದು ಸಚಿವ ಖಂಡ್ರೆ ವಿಷಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಪರಿಸರ ಉಳುವಿಗೆ ಮತ್ತು ಗಿಡ, ಮರಗಳ ರಕ್ಷಣೆಗೆ ಸರ್ಕಾರ ಸಾಕಷ್ಟು ಅನುದಾನ ನೀಡಿ ಖರ್ಚು ಮಾಡುತ್ತಿದೆ. ನಾವೆಲ್ಲರೂ ಗಿಡ ಮರಗಳನ್ನು ಹೆಚ್ಚು ಹೆಚ್ಚು ಬೆಳೆಸೋಣ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕ ರಾಜಾ ವೇಣು ಗೋಪಾಲ ನಾಯಕ್, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಎಸ್ ಪಿ ಪ್ರಥ್ವಿಕ್ ಶಂಕರ್, ಹೆಚ್ಚುವರಿ ಡಿಸಿ ರಮೇಶ ಕೋಲಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಚೇತನ್ ಗಸ್ತಿ, ಸುಮೀತ್ ಕುಮಾರ್ ಪಾಟೀಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹ್ಮದ್ ಅಸದ್ ಸೇರಿದಂತೆಯೇ ಇತರರಿದ್ದರು.

ಆರ್.ಜೆ.ಮಂಜು ನಿರೂಪಿಸಿದರು.‌ ಹಿರಿಯ ಕಲಾವಿದ ಚಂದ್ರಶೇಖರ ಗೋಗಿ ತಂಡದಿಂದ ನಾಡಗೀತೆ ನಡೆಯಿತು. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆ ಮಹಿಳೆಯರು, ವಿವಿಧ ಗಣ್ಯರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News