ಯಾದಗಿರಿ | ರತ್ತಾಳ ಅಂಗನವಾಡಿ ಕಾರ್ಯಕರ್ತೆಯರ ವಿರುದ್ಧ ಕ್ರಮಕ್ಕೆ ಮನವಿ
ಸುರಪುರ: ತಾಲೂಕಿನ ರತ್ತಾಳ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಸರಿಯಾಗಿ ಆಹಾರ ಸಾಮಗ್ರಿಗಳ ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣದ ಮುಖಂಡರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ರತ್ತಾಳ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿದ್ದು, ಎರಡರ ಕಾರ್ಯಕರ್ತೆಯರು ಮಕ್ಕಳಿಗೆ ಸರಕಾರ ದಿಂದ ಬರುವ ಯಾವುದೇ ಸಾಮಾಗ್ರಿಗಳನ್ನು ವಿತರಣೆ ಮಾಡುತ್ತಿಲ್ಲ, ಕೇಳಿದರೆ ಸರಕಾರ ದಿಂದ ಬಂದಿಲ್ಲ ಎಂದು ಹೇಳುತ್ತಾರೆ. ಮೇಲ್ವಿಚಾರಕರು ಸರಿಯಾದ ಮಾಹಿತಿ ನೀಡುತ್ತಿಲ್ಲ, ಇದರಿಂದ ಸರಕಾರ ಯೋಜನೆಯಿಂದ ಗ್ರಾಮದ ಮಕ್ಕಳು ವಂಚಿತರಾಗುತ್ತಿದ್ದಾರೆ. ಕೂಡಲೇ ಕಾರ್ಯರ್ತೆಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಸಿಡಿಪಿಓ ಲಾಲಸಾಬ್ ಪೀರಾಪುರಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ, ಉಪ ವಿಭಾಗಿಯ ಸಂಚಾಲಕ ರಮೇಶ ಬಡಿಗೇರ, ಅಲ್ಪಸಂಖ್ಯಾತ ಘಟಕದ ಸಂಚಾಲಕ ಎಮ್.ಪಟೇಲ್, ಸಂಘಟನಾ ಸಂಚಾಲಕರಾದ ಶೇಖರ ಮಂಗಳೂರ, ವೆಂಕಟೇಶ ದೇವಾಪುರ,ರಾಜು ಬಡಿಗೇರ, ಖಾಜಾ ಅಜ್ಮೀರ್, ಮೌನೇಶ ದೇವತ್ಕಲ್, ಹಣಮಂತ ರತ್ತಾಳ, ಯಲ್ಲಪ್ಪ ರತ್ತಾಳ, ಸಿದ್ದಪ್ಪ ಸುರಪೂರಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.